ಶಶಿ ತರೂರ್‌ ಮಾತು ಕೇಳಿ ನಡುಗಿ ಹೋದ ಸಹ ಪ್ರಯಾಣಿಕ…ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

ಜೈಪುರ : ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ತಂಗಿಗಾಗಿ ಏರ್‌ಪೋರ್ಟ್‌ನಲ್ಲಿ ಕಾಯುತ್ತಿರುವಾಗ ಅವರು ಫೋನಿನಲ್ಲಿ ಮಾತನಾಡುತ್ತಿದ್ದುದನ್ನು ಕೇಳಿದ ಪ್ರಯಾಣಿಕನೊಬ್ಬ ದಂಗಾಗಿ ಹೋದ ಘಟನೆ ನಡೆದಿದೆ.

ಶಶಿ ತರೂರ್‌ ಜೈಪುರ ವಿಮಾನ ನಿಲ್ದಾಣದಲ್ಲಿ ಸಹೋದರಿಗಾಗಿ ಕಾಯುತ್ತಿದ್ದರು. ಈ ವೇಳೆ ತರೂರ್‌ ಪಕ್ಕದಲ್ಲಿದ್ದವರೊಂದಿಗೆ ಮಾತನಾಡುವ ವೇಳೆ ಸಿಸ್ಟರ್‌ ಎಂದಿದ್ದು. ಇನ್ನೊಬ್ಬ ಪ್ರಯಾಣಿಕನಿಗೆ ಪಿಸ್ತೂಲ್‌ ಎಂಬಂತೆ ಕೇಳಿಸಿದೆ. ಇದರಿಂದ ಗಾಬರಿಯಾದ ಪ್ರಯಾಣಿಕ ಕೂಡಲೆ ತುರ್ತು ಸಹಾಯಕ್ಕಾಗಿ ಪ್ಯಾನಿರ್‌ ಬಟನ್‌ ಪ್ರೆಸ್‌ ಮಾಡಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾನೆ.

ಬಳಿಕ ಖುದ್ದು ಶಶಿ ತರೂರ್‌ ಈ ಗೊಂದಲವನ್ನು ಬಗೆಹರಿಸಿದ್ದಾರೆ. ನಾನು ಪಿಸ್ತೂಲ್‌ ಎಂದಿಲ್ಲ, ಸಿಸ್ಟರ್‌ ಗಾಗಿ ಕಾಯುತ್ತಿರುವುದಾಗಿ ಹೇಳಿದ್ದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com