Australian Open : ಗಾಯಗೊಂಡು ನಿವೃತ್ತಿಯಾದ ಚುಂಗ್ : ಫೈನಲ್‍ಗೆ ಫೆಡರರ್

ಶುಕ್ರವಾರ ರಾಟ್ ಲೆವರ್ ಅರೆನಾದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ಆಟಗಾರ ಚುಂಗ್ ಹೆಯಾನ್ ಗಾಯಗೊಂಡು ನಿವೃತ್ತಿ ಹೊಂದಿದ ಕಾರಣ ರೋಜರ್ ಫೆಡರರ್ ಫೈನಲ್ ಪ್ರವೇಶಿಸಿದ್ದಾರೆ. 36 ವರ್ಷದ ಫೆಡರರ್ ತಮ್ಮ 20ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಕನಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಮೊದಲ ಸೆಟ್ ಅನ್ನು 6-1 ರಿಂದ ಗೆದ್ದಿದ್ದ ಫೆಡರರ್, ಎರಡನೇ ಸೆಟ್ ನಲ್ಲಿಯೂ 5-2 ಪಾಯಿಂಟ್ ಗಳಿಂದ ಮುನ್ನಡೆ ಸಾಧಿಸಿದ್ದರು. ಈ ವೇಳೆ ದಕ್ಷಿಣ ಕೋರಿಯಾದ ಚುಂಗ್ ಹೆಯಾನ್ ಪಾದದ ನೋವಿನಿಂದ ಆಟದಿಂದ ನಿವೃತ್ತಿ ಹೊಂದಿದರು. ಇದರಿಂದಾಗಿ ಸ್ವಿಸ್ ಆಟಗಾರ ಫೆಡರರ್ ಫೈನಲ್ ಪ್ರವೇಶಿದರು.

ರವಿವಾರ ನಡೆಯಲಿರುವ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್, ಕ್ರೋವೆಶಿಯಾದ ಮರಿನ್ ಸಿಲಿಕ್ ಅವರನ್ನು ಎದುರಿಸಲಿದ್ದಾರೆ. ಮರೀನ್ ಸಿಲಿಕ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೈಲ್ ಎಡ್ಮಂಡ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com