Cricket U-19 ವಿಶ್ವಕಪ್ : ಬಾಂಗ್ಲಾ ವಿರುದ್ಧ ಸುಲಭ ಜಯ : ಸೆಮಿಫೈನಲ್‍ಗೆ ಭಾರತ

ನ್ಯೂಜಿಲೆಂಡಿನ ಕ್ವೀನ್ಸ್ ಟೌನ್ ನಲ್ಲಿ ಶುಕ್ರವಾರ ನಡೆದ U-19 ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶ ವಿರುದ್ಧ 131 ರನ್ ಅಂತರದಿಂದ ಜಯಗಳಿಸಿದೆ. ಈ ಮೂಲಕ ಪೃಥ್ವಿ ಶಾ ನೇತೃತ್ವದ ಕಿರಿಯರ ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 49.3 ಓವರುಗಳಲ್ಲಿ 265 ರನ್ ಸೇರಿಸಿ ಆಲೌಟ್ ಆಯಿತು. ಭಾರತದ ಪರವಾಗಿ ಶುಭಮಮನ್ ಗಿಲ್ 86, ಅಭಿಷೇಕ್ ಶರ್ಮಾ 50, ನಾಯಕ ಪೃಥ್ವಿ ಷಾ 40 ರನ್ ಗಳಿಸಿದರು. ಬಾಂಗ್ಲಾ ಪರವಾಗಿ ಕಾಜಿ ಒನಿಕ್ 3, ನಯೀಮ್ ಹಸನ್ 2, ಸೈಫ್ ಹಸನ್ 2 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 42.1 ಓವರುಗಳಲ್ಲಿ 134ಕ್ಕೆ ಆಲೌಟ್ ಆಯಿತು. ಬಾಂಗ್ಲಾ ಪರವಾಗಿ ಪಿನಾಕ್ ಘೋಷ್ 43 ರನ್ ಗಳಿಸಿದರು. ಭಾರತದ ಪರವಾಗಿ ಕಮಲೇಶ್ ನಗರಕೋಟಿ 3, ಶಿವಮ್ ಮವಿ 2, ಅಭಿಷೇಕ್ ಶರ್ಮಾ 2 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com