ನಿಜವಾಗ್ಲೂ ಈ BJP ಯವರಿಗೆ ಕಾಮನ್‌ ಸೆನ್ಸ್‌ ಇಲ್ಲ : ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ : ಯಾವುದಾದರೂ ಸಂಘಟನೆಗಳು ಸರ್ಕಾರವನ್ನು ಕೇಳಿ ಬಂದ್‌ ಮಾಡ್ತಿವೆಯಾ?, ನಿಜವಾಗ್ಲು ಈ ಬಿಜೆಪಿಯವರಿಗೆ ಕಾಮನ್‌ಸೆನ್ಸ್‌ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು ಬರುವ ದಿನ ಬಂದ್ ಮಾಡುವುದು ಬೇಡ ಎಂದಿದ್ದೆ. ಆದರೆ ನರೇಂದ್ರ ಮೋದಿಯವರ ಗಮನ ಸೆಳೆಯಲು ಕನ್ನಡಪರ ಸಂಘಟನೆಗಳು ಬಂದ್ ಮಾಡುತ್ತಿವೆ. ಮಹದಾಯಿ ವಿಚಾರದಲ್ಲಿ ಇಷ್ಟೆಲ್ಲಾ ಗಲಾಟೆಯಾಗುತ್ತಿದ್ದರೂ ಅಮಿತ್‌ ಶಾ ಆಗಲಿ, ಪ್ರಧಾನಿಯಾಗಲಿ ತುಟಿಕ್‌ ಪಿಟಿಕ್ ಎನ್ನಲಿಲ್ಲ. ಗೋವಾ ಚಿಕ್ಕ ರಾಜ್ಯವಾದರೂ ಅಲ್ಲಿಯ ಸಚಿವರು ಕನ್ನಡಿಗರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ನೆಲ ಜಲ ಭಾಷೆ ವಿಚಾರದಲ್ಲಿ ಸಂಘಟನೆಗಳು ಬಂದ್ ಮಾಡ್ತಿವೆ. ಬಿಜೆಪಿ ಇದ್ದಾಗಲೂ ಬಂದ್ ಮಾಡಿದ್ದಾರೆ ಈಗಲೂ ಬಂದ್ ಮಾಡಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.