ನಾನು ದೇವಗೌಡರಂತೆ ಏಳನೇ ಕ್ಲಾಸ್‌ನಲ್ಲಿ ಏಳು ಬಾರಿ ಫೇಲ್‌ ಆಗಿ ಮಂತ್ರಿಯಾಗಿಲ್ಲ : A. ಮಂಜು

ಬೆಂಗಳೂರು : ನಾನು ನಿಮ್ಮಂತೆ ಏಳನೇ ತರಗತಿಯಲ್ಲಿ ಏಳು ಬಾರಿ ಫೇಲ್‌ ಆಗಿ ಮಂತ್ರಿಯಾಗಿಲ್ಲ. ನಾನು ಡಬಲ್‌ ಗ್ರಾಜುಯೇಟ್‌ ಆಗಿ ಸ್ವಂತ ಶಕ್ತಿಯಿಂದ ಸಚಿವನಾಗಿದ್ದೇನೆ ಎಂದು ಸಶುಸಂಗೋಪನಾ ಸಚಿವ ಎ.ಮಂಜು, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗಷ್ಟೇ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಕುರಿತು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಈ ವಿಚಾರದಲ್ಲಿ ಮಂಜು ವಿರುದ್ಧ ಏಕವಚನದಲ್ಲಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಂಜು, ವಯಸ್ಸಾದವರು ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ಅವರಿಂದ ನಾನೇನೂ ಕಲಿಯುವ ಅಗತ್ಯವಿಲ್ಲ. ದೇವೇಗೌಡರು ಸೋತು ಮನೆಯಲ್ಲಿ  ಕುಳಿತಿದ್ದಾಗ ನನ್ನ ಬಳಿ ಸಹಾಯ ಕೇಳಿಕೊಂಡು ಬಂದಿದ್ದರು. ನಾನು ಅವರ ಹಂಗಿನಲ್ಲಿಲ್ಲ. ಆದರೆ ಅವರೇ ನನ್ನ ಹಂಗಿನಲ್ಲಿರುವುದಾಗಿ ಟೀಕಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com