WATCH : 60 ವರ್ಷದ ವೃದ್ದೆ ಮೇಲೆ 10 ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಮೀರತ್‌ : 60 ವರ್ಷದ ವೃದ್ಧೆಯ ಮೇಲೆ ದುಷ್ಕರ್ಮಿಗಳು 10 ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ ಜಿಲ್ಲೆಯಲ್ಲಿ ನಡೆದಿದೆ.

ಬುಧವಾರ ಸಂಜೆ ವೃದ್ಧೆ ನಿಚೇತರ್‌ ಕೌರ್‌ ತಮ್ಮ ಮನೆಯ ಹೊರಗೆ ಕುಳಿತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಬಂದು ವೃದ್ಧೆ ಕೌರ್‌ ಎದೆಗೆ ಗುಂಡ ಹಾರಿಸಿದ್ದಾನೆ. ಆಕೆ ಕೆಳಗೆ ಬಿದ್ದ ಬಳಿಕ ಮತ್ತಿಬ್ಬರು ಬಂದು 1 ಬಾರಿ ಸತತವಾಗಿ ಶೂಟ್‌ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

6 ಬಾರಿ ಗುಂಡು ಬಿದ್ದಿದ್ದರೂ ಕೌರ್‌ ಒದ್ದಾಡುತ್ತಿದ್ದುದನ್ನು ನೋಡಿದ ಮತ್ತೊಬ್ಬ ದುಷ್ಕರ್ಮಿ ತಲೆಗೆ ಗುಂಡು ಹೊಡೆದಿದ್ದಾನೆ. ದುಷ್ಕರ್ಮಿಗಳು ಕರ್ಚೀಫ್‌ನಿಂದ ಮುಖಕ್ಕೆ ಕಟ್ಟಿಕೊಂಡಿದ್ದು, ಸದ್ಯ ಪೊಲೀಸರು ಹಂತಕರಿಗಾಗಿ ಹುಡುಕಾಟ ನಡೆಸಿದ್ದಾರೆ.

2016ರಲಲಿ ಕೌರ್ ಪತಿಯನ್ನು ಜಮೀನು ವಿವಾದ ಸಂಬಂಧ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕೌರ್‌ ಅವರ ಕೆಲಸ ಸಂಬಂಧಿಕರು ಜೈಲು ಸೇರಿದ್ದರು. ಕೊಲೆ ಪ್ರಕರಣ ಸಂಬಂಧ ಕೌರ್ ಹಾಗೂ ಅವರ ಪುತ್ರ ಬಲ್ವಿಂದರ್‌ ಸಾಕ್ಷಿ ಹೇಳಲು ಗುರುವಾರ ಕೋರ್ಟ್‌ಗೆ ಹಾಜರಾಗಬೇಕಿತ್ತು.

ಘಟನೆ ಸಂಬಂಧ ಓರ್ವ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಸರಿಯಾದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಐವರನ್ನು ಅಮಾನತು ಮಾಡಲಾಗಿದೆ.

Leave a Reply

Your email address will not be published.