Cricket : U-19 ವಿಶ್ವಕಪ್ : ಭಾರತ – ಬಾಂಗ್ಲಾದೇಶ ಕ್ವಾರ್ಟರ್ ಫೈನಲ್ ಕಾದಾಟಕ್ಕೆ ವೇದಿಕೆ ಸಜ್ಜು

ನ್ಯೂಜಿಲೆಂಡ್ ನ ಕ್ವೀನ್ಸ್ ಟೌನ್ ನಲ್ಲಿ ಶುಕ್ರವಾರ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ಅಂಡರ್-19 ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್ ಸ್ಥಾನಕ್ಕಾಗಿ ಭಾರತ ಹಾಗೂ ಬಾಂಗ್ಲಾ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ. ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಮಾರ್ಗದರ್ಶನ ಪಡೆಯುತ್ತಿರುವ ಭಾರತದ ಕಿರಿಯರ ತಂಡ ಉತ್ಸಾಹದಲ್ಲಿದೆ.

ಲೀಗ್ ಹಂತದಲ್ಲಿ ‘ಬಿ’ ಮೂರೂ ಪಂದ್ಯಗಳನ್ನು ಗೆದ್ದಿರುವ ಭಾರತ ಆತ್ಮವಿಶ್ವಾಸದಲ್ಲಿದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ, ಜಿಂಬಾಬ್ವೆ ಹಾಗೂ ಪಪುವಾ ನ್ಯೂ ಗಿನಿ ತಂಡಗಳ ವಿರುದ್ಧ ಸುಲಭ ಜಯಗಳಿಸಿದ್ದ ಭಾರತ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ.

ಭಾರತ ಇದುವರೆಗೆ 3 ಬಾರಿ ಅಂಡರ್-19 ವಿಶ್ವಕಪ್ ಎತ್ತಿ ಹಿಡಿದಿದೆ. 2000 ದಲ್ಲಿ ಮಹಮ್ಮದ್ ಕೈಫ್ ನೇತೃತ್ವದಲ್ಲಿ, 2008 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಹಾಗೂ 2012 ರಲ್ಲಿ ಉನ್ಮುಕ್ತ್ ಚಂದ್ ಮುಂದಾಳತ್ವದಲ್ಲಿ ಭಾರತ ಚಾಂಪಿಯನ್ ಎನಿಸಿಕೊಂಡಿತ್ತು. ಪ್ರಥ್ವಿ ಶಾ ನೇತೃತ್ವದ ಭಾರತ ನಾಲ್ಕನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸನ್ನು ಹೊಂದಿದೆ.

Leave a Reply

Your email address will not be published.