ರಾಮ-ಸೀತೆ ಇಬ್ಬರೂ ಗೋಮಾಂಸ ಸೇವಿಸುತ್ತಿದ್ದರು : ನಿಡುಮಾಮಿಡಿ ಸ್ವಾಮೀಜಿ

ಬಳ್ಳಾರಿ : ರಾಮ-ಸೀತೆ ಇಬ್ಬರೂ ಗೋಮಾಂಸ ತಿನ್ನುತ್ತಿದ್ದರು ಎಂದು ವಾಲ್ಮೀಕಿ ರಾಮಾಯಣದಲ್ಲಿ ಹೇಳಿದೆ. ಯಜ್ಞ ಯಾಗಾದಿಳು ನಡೆಯುವ ಸಮಯದಲ್ಲೂ ಗೋಮಾಂಸ ಸೇವನೆ ಮಾಡುತ್ತಿದ್ದರು. ಇದನ್ನು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಯವರು ಮರೆತಂತಿದೆ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದ್ದಾರೆ.

ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಾಂಸ್ಕೃತಿಕ ಸರ್ವಾಧಿಕಾರ ನಡೆಸುತ್ತಿದೆ ಎಂದಿರುವ ಸ್ವಾಮೀಜಿ, ಇದು ಪ್ರಜಾಪ್ರಭುತ್ವಕ್ಕಾಗುವ ದೊಡ್ಡ ಅಪಾಯ. ಆಗ ಗೋಮಾಂಸ ತಿನ್ನುತ್ತಿದ್ದವರೆಲ್ಲರೂ ಪೂಜ್ಯರು. ಇಂದು ಗೋಮಾಂಸ ತಿನ್ನುವವರೆಲ್ಲರೂ ಅಲ್ಲ ಎಂದರೆ ಅರ್ಥವೇನು ಎಂದಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,ಮೋದಿ ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಾಗಿ ಹೇಳಿದ್ದಾರೆ. ಬಳಿಕ ಮುಸ್ಲಿಂ, ಕ್ರೈಸ್ತ ಹಾಗೂ ಜೈನ ಮುಕ್ತ ಭಾರತ ಎನ್ನುತ್ತಾರೆ. ಅವರ ಉದ್ದೇಶವೇನು. ಇಡೀ ಭಾರತದಲ್ಲಿ ಅವರು ಮಾತ್ರ ಉಳಿಯಬೇಕು, ಇನ್ನುಳಿದವರೆಲ್ಲರೂ ಅಳಿಯಬೇಕು ಎಂಬ ಧೋರಣೆ ಸರಿಯಲ್ಲ ಎಂದಿದ್ದಾರೆ.

ಹಿಂದುಗಳು ನಾವೆಲ್ಲ ಒಂದು, ನಾವೆಲ್ಲ ಬಂಧುಗಳು ಎಂದು ಆರ್‌ಎಸ್‌ಎಸ್‌, ಸಂಘಪರಿವಾರದವರು ಹೇಳುತ್ತಾರೆ. ಆದರೆ ಅಸ್ಪೃಶ್ಯರನ್ನು,ದಲಿತರನ್ನು ಕೀಳಾಗಿ ನೋಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com