WATCH : ಈ Video ನೋಡೋಕೆ ಗುಂಡಿಗೆ ಗಟ್ಟಿ ಇರಲೇಬೇಕು……!!!

ಮುಂಬೈ : ಮಹರಾಷ್ಟ್ರದಲ್ಲಿ ಎದೆ ಝಲ್ಲೆನಿಸುವಂತಹ ಘಟನೆಯೊಂದು ನಡೆದಿದೆ. ಬೈಕ್‌ ಸವಾರರಿಬ್ಬರು ಕಾಡಿನ ದಾರಿಯಲ್ಲಿ ಎರಡು ಹುಲಿಗಳ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ವಿಡಿಯೊ ಎಲ್ಲೆಡೆ ವೈರಲ್‌ ಆಗಿದೆ.

ಬೈಕ್‌ ಸವಾರರಿಬ್ಬರು ಕಾಡಿನ ಹಾದಿಯಲ್ಲಿ ಬರುವ ವೇಳೆ ಎರಡು ಹುಲಿಗಳು ಎದುರಾಗಿದ್ದವು. ಅವುಗಳನ್ನು ನೋಡಿದಾಗಲೇ ಬೈಕ್‌ ಸವಾರರಿಗೆ ನಡುಕ ಶುರುವಾಗಿದ್ದು, ತಮ್ಮನ್ನು ಕೊಂದು ತಿಂದು ಬಿಡುತ್ತವೆ ಎಂಬ ಆತಂಕದಲ್ಲೇ ಇದ್ದರು. ಏನಾದರಾಗಲಿ ಎಂದು ಉಸಿರು ಬಿಗಿ ಹಿಡಿದುಕೊಂಡು ಕೊಂಚವೂ ಅಲುಗಾಡದೆ ಬೈಕ್‌ನಲ್ಲೇ ಕುಳಿತುಬಿಟ್ಟಿದ್ದರು.

ಆದರೆ ಯಾಕೋ ಹುಲಿಗಳಿಗೆ ಹೊಟ್ಟೆ ತುಂಬಿದಂತಿತ್ತು. ಎರಡೂ ಹುಲಿಗಳು ಅವರನ್ನು ನೋಡಿಯೂ ಹಾಗೇ ಸುಮ್ಮನೆ ಹೋಗಿವೆ. ಬೈಕ್‌ನ ಎದುರಿಗಿದ್ದ ಕಾರಿನವು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಹುಲಿಗಳು ಸ್ವಲ್ಪ ದೂರ ಹೋದ ಬಳಿಕ ಕಾರಿನಲ್ಲಿ ವೇಗವಾಗಿ ಬಂದು ಇಬ್ಬರನ್ನೂ ಸೇಫಾಗಿ ಕರೆದೊಯ್ದಿದ್ದಾರೆ. ಈ ವಿಡಿಯೋ ಫೇಸ್‌ ಬುಕ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com