ಬಂದ್‌ ದಿನವೇ ಕರ್ನಾಟಕಕ್ಕೆ ಬಂದ್ರೂ ಮಹದಾಯಿ ಬಗ್ಗೆ ತುಟಿಬಿಚ್ಚದ ಅಮಿತ್‌ ಶಾ

ಬೆಂಗಳೂರು : ಮಹದಾಯಿ ನದಿನೀರು ಹಂಚಿಕೆ ವಿವಾದ ಸಂಬಂಧ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಕರ್ನಾಟಕ ಬಂದ್‌ ಮಾಡಲಾಗಿದ್ದು, ಬಂದ್ ದಿನವೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ರಾಜ್ಯಕ್ಕೆ ಬಂದರೂ ಮಹದಾಯಿ ವಿಚಾರವಾಗಿ ಒಂದೇ ಒಂದು ಮಾತನಾಡದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಮಹಾಯಿ ನದಿ ನೀರು ಉತ್ತರ ಕರ್ನಾಟಕದ ರೈತರಿಗೆ ಜೀವನವಾಗಿದ್ದು, ಗೋವಾ ಹಾಗೂ ಕರ್ನಾಟಕದ ಮಧ್ಯೆ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೀರಿಗಾಗಿ ಕಾದು ಕುಳಿತಿರುವ ಉತ್ತರ ಕರ್ನಾಟಕದ ಜನತೆಗೆ ಸಹಾಯ ಮಾಡಬೇಕು. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಕನ್ನಡ ಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಆದರೆ ಬಂದ್‌ ಇದ್ದ ದಿನವೇ ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಅಮಿತ್‌ ಶಾ ಆಗಮಿಸಿದ್ದರೂ, ಕೇವಲ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆಯೇ ವಿನಃ ಮಹದಾಯಿ ವಿವಾದದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಕನ್ನಡಪರ ಸಂಘಟನೆಗಳು ಅಮಿತ್ ಶಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com