Indonesia Masters Badminton : ಎರಡನೇ ಸುತ್ತು ಪ್ರವೇಶಿಸಿದ ಸೈನಾ, ಸಿಂಧು

ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಇಂಡೋನೇಷ್ಯಾ ಮಾಸ್ಟರ್ಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತನ್ನು ಪ್ರವೇಶಿಸಿದ್ದಾರೆ.

ಗುರುವಾರ ನಡೆಯಲಿರುವ ಮುಂದಿನ ಸುತ್ತಿನ ಪಂದ್ಯದಲ್ಲಿ ಸೈನಾ ಚೀನಾದ ಚೆನ್ ಕ್ಸಿಯಾಕ್ಸಿನ್ ಅವರನ್ನು ಎದುರಿಸಲಿದ್ದು, ಸಿಂಧು ಮಲೇಷ್ಯಾದ ಗೊಹ್ ಜಿನ್ ವೇ ಅವರೊಂದಿಗೆ ಕ್ವಾರ್ಟರ್ ಫೈನಲ್ ಸ್ಥಾನಕ್ಕಾಗಿ ಸೆಣಸಾಡಲಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪಾರುಪಳ್ಳಿ ಕಶ್ಯಪ್, ಮಲೇಷ್ಯಾದ ವೆ ಫೆಂಗ್ ಚಾಂಗ್ ವಿರುದ್ಧ 18-21, 18-21 ಪಾಯಿಂಟ್ ಗಳಿಂದ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಭಾರತದ ಮತ್ತೋರ್ವ ಆಟಗಾರ ಸಮೀರ್ ವರ್ಮಾ ಜಪಾನಿನ ಕಜುಮಾಸಾ ಸಕಾಯಿ ವಿರುದ್ಧ 16-21, 21-12, 10-21 ಪಾಯಿಂಟ್ ಗಳಿಂದ ಸೋತು ಟೂರ್ನಿಯಿಂದ ಹೊರನಡೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com