Four Nations Hockey : ಬೆಲ್ಜಿಯಂ ವಿರುದ್ಧ ಭಾರತಕ್ಕೆ ರೋಚಕ ಜಯ

ಗುರುವಾರ ಹ್ಯಾಮಿಲ್ಟನ್ ನಲ್ಲಿ ನಡೆದ ಫೋರ್ ನೇಶನ್ಸ್ ಇನ್ವಿಟೇಶನಲ್ ಹಾಕಿ ಟೂರ್ನಿಯ ದ್ವಿತೀಯ ಲೆಗ್ ಪಂದ್ಯದಲ್ಲಿ ಭಾರತ ಬಲಿಷ್ಟ ಬೆಲ್ಜಿಯಂ ತಂಡದ ವಿರುದ್ಧ 5-4 ರಿಂದ ರೋಚಕ ಜಯ ಸಾಧಿಸಿದೆ. ಮೊದಲ ಲೆಗ್ ನ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 1-2 ರಿಂದ ನಿರಾಸೆ ಅನುಭವಿಸಿತ್ತು.

ಭಾರತದ ಪರವಾಗಿ ರೂಪಿಂದರ್ ಪಾಲ್ ಸಿಂಗ್ 2 , ಹರ್ಮನ್ ಪ್ರೀತ್ ಸಿಂಗ್, ಲಲಿತ್ ಉಪಾಧ್ಯಾಯ್ ಹಾಗೂ ದಿಲ್ ಪ್ರೀತ್ ಸಿಂಗ್ ತಲಾ 1 ಗೋಲ್ ಬಾರಿಸಿದರು. ಬೆಲ್ಜಿಯಂ ಪರವಾಗಿ ಜಾನ್-ಜಾನ್ ಡಾಹ್ಮೆನ್, ಫೆಲಿಕ್ಸ್ ಡೆನಾಯರ್, ಅಲೆಕ್ಸಾಂಡರ್ ಹೆಂಡ್ರಿಕ್ಸ್ ಹಾಗೂ ಟಾಮ್ ಬೂನ್ ತಲಾ 1 ಗೋಲ್ ದಾಖಲಿಸಿದರು.

ಜನೆವರಿ 27ರಂದು ಶಣಿವಾರ ಭಾರತ ತನ್ನ ಮೂರನೇ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಾಡಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com