ಸನ್ಯಾಸತ್ವ ಸ್ವೀಕಾರಕ್ಕೂ ಮುನ್ನ ಫೋಟೋ ಶೂಟ್‌ ಮಾಡಿಸಿಕೊಂಡ ಯುವತಿ…!!

ಅಹಮದಾಬಾದ್‌ : ಸನ್ಯಾಸ ದೀಕ್ಷೆ ಪಡೆಯುವುದಕ್ಕೂ ಮುನ್ನ 28 ವರ್ಷದ ಯುವತಿಯೊಬ್ಬಳು ಫೋಟೋಶೂಟ್‌ ಮಾಡಿಸಿಕೊಂಡಿರುವ ಸಂಗತಿ ಗುಜರಾತ್‌ನಲ್ಲಿ ಬೆಳಕಿಗೆ ಬಂದಿದೆ.

ಗುಜರಾತ್‌ ಮೂಲದ ಶೆಫಲಿ ಕುಮಾರಿ (28) ಜೈನ ದೀಕ್ಷೆ ಪಡೆಯುವ ಸಂಕಲ್ಪ ಕೈಗೊಂಡಿದ್ದರು. ಇದಕ್ಕೂ ಮುನ್ನ ಅವರು ವಿವಿಧ ಬಗೆಯ ಉಡುಗೆಗಳಲ್ಲಿ ಫೋಟೋಶೂಟ್‌ ಮಾಡಿಸಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ.

ಶೆಫಲ ತನ್ನ 15ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದು, ಬಳಿಕ ತಾಯಿ ಹಾಗೂ ಸಹೋದರನಿಂದ ದೂರವಿದ್ದುಕೊಂಡೇ ವಿದ್ಯಾಭ್ಯಾಸ ಮುಗಿಸಿದ್ದರು. ಪ್ರಪಂಚದ ಜಂಜಾಟಗಳಿಂದ ಬೇಸತ್ತಿದ್ದ ಶೆಫಲಿ, ನನಗೆ ಈ ಪ್ರಪಂಚ ಎಲ್ಲವನ್ನು ನೀಡಿದೆ. ಆದರೆ ನನಗೆ ಇದ್ಯಾವುದೂ ಬೇಡ ಎನಿಸುತ್ತಿದೆ. ಆದ್ದರಿಂದ ಸನ್ಯಾಸ ದೀಕ್ಷೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

ಗುಜರಾತ್‌ನ ವಸಂತ್‌ ಪಂಚಮಿ ಕಾರ್ಯಕ್ರಮದಲ್ಲಿ ಈಕೆ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ.ಜನವರಿ 23ರಂದು ಸಂಜೆ 6.30ರ ಸುಮಾರಿಗೆ ನಿಜಾಂಪುರ ಜೈನ್‌ ಯೂನಿಯನ್‌ ಶೆಫಲಿಗೆ ಸನ್ಯಾಸತ್ವ ನೀಡಿದೆ. ಕಾರ್ಯಕ್ರಮದಲ್ಲಿ ಜೈನ ಸಮುದಾಯ 100ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದು. ಶೆಫಲಿ ನಿರ್ಧಾರಕ್ಕೆ ಸಹೋದರ ಸಹ ಬೆಂಬಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com