Cricket : 5 ವಿಕೆಟ್ ಪಡೆದ ಬುಮ್ರಾ : ದ.ಆಫ್ರಿಕಾ 194ಕ್ಕೆ ಆಲೌಟ್

ಜೋಹಾನೆಸ್‍ಬರ್ಗ್‍ನ ವಾಂಡರರ್ಸ್ ಅಂಗಳದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ 194ಕ್ಕೆ ಆಗಿದೆ. ಈ ಮೂಲಕ ಆತಿಥೇಯ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 7 ರನ್ ಮುನ್ನಡೆ ಸಾಧಿಸಿತು.

ದಕ್ಷಿಣ ಆಫ್ರಿಕಾ ಪರವಾಗಿ ಹಾಶಿಮ್ ಆಮ್ಲಾ 61, ವೆರ್ನನ್ ಫಿಲ್ಯಾಂಡರ್ 35, ಕಗಿಸೊ ರಬಾಡಾ 30 ರನ್ ಗಳಿಸಿದರು. ಭಾರತದ ಪರವಾಗಿ ಉತ್ತಮ ಬೌಲಿಂಗ್ ನಡೆಸಿದ ಜಸ್ಪ್ರೀತ್ ಬುಮ್ರಾ 5, ಭುವನೇಶ್ವರ್ ಕುಮಾರ್ 3, ಇಶಾಂತ್ ಶರ್ಮಾ 1, ಮಹಮ್ಮದ್ ಶಮಿ 1 ವಿಕೆಟ್ ಪಡೆದರು.

ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 49 ರನ್ ಗಳಿಸಿದ್ದು, 42 ರನ್ ಮುನ್ನಡೆ ಸಾಧಿಸಿದೆ. ಮುರಳಿ ವಿಜಯ್ (16*) ಹಾಗೂ ಕೆ.ಎಲ್ ರಾಹುಲ್ (16*) ಅಜೇಯರಾಗುಳಿದಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಪಾರ್ಥಿವ್ ಪಟೇಲ್ 13 ರನ್ ಗಳಿಸಿ ಔಟಾದರು.

Leave a Reply

Your email address will not be published.