Bollywood : ಬೆಸ್ಟ್‌ ಕಿಸ್ಸರ್‌ ಯಾರು ಅಂತ ಕೇಳಿದ್ದಕ್ಕೆ ದೀಪಿಕಾ ಕೊಟ್ಟ ಉತ್ತರವೇನು…..?

ಮುಂಬೈ : ಬಾಲಿವುಡ್‌ನ ಹಾಟ್‌ ಎಂಡ್‌ ಕ್ಯೂಟ್‌ ಜೋಡಿಗಳಲ್ಲಿ ದೀಪಿಕಾ ರಣವೀರ್‌ಸಿಂಗ್‌ ಜೋಡಿ ಸಹ ಒಂದು. ಈಗಾಗಲೆ ರಣವೀರ್‌-ದೀಪಿಕಾ ಮಧ್ಯೆ ಪ್ರೀತಿ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಇದುವರೆಗೂ ಅದರ ಬಗ್ಗೆ ಇಬ್ಬರೂ ಬಾಯಿ ಬಿಟ್ಟು ಹೇಳಿಲ್ಲ ಅಷ್ಟೇ.

ಆದರೆ ಇತ್ತೀಚೆಗಷ್ಟೇ ರಣವೀರ್‌ ಸಿಂಗ್‌, ದೀಪಿಕಾ ಬೆಸ್ಟ್‌ ಕಿಸ್ಸರ್‌ ಎಂದಿದ್ದರು. ಈಗ ಅದಕ್ಕೆ ಸರಿಯಾಗಿ ದೀಪಿಕಾ ಸಹ ಹಣವೀರ್‌ ಕುರಿತು ಇಂಟರೆಸ್ಟಿಂಗ್‌ ಸುದ್ದಿಯೊಂದನ್ನು ಹೇಳಿದ್ದಾರೆ. ರಣವೀರ್‌ ಸಹ ಬೆಸ್ಟ್‌ ಕಿಸ್ಸರ್‌ ಎಂದು ದೀಪಿಕಾ ಹೇಳಿದ್ದು, ವಾಟ್ಸಾಪ್‌ ಹಾಗೂ ಫೇಸ್‌ಬುಕ್‌ಗಳಲ್ಲಿ ಈ ವಿಡಿಯೊ ಹರಿದಾಡುತ್ತಿದೆ.

ಇತ್ತೀಚೆಗಷ್ಟೇ ನೇಹಾ ದೂಪಿಯಾ ನಡೆಸಿಕೊಡುವ ವೋಗ್‌ ಬಿಎಫ್‌ಎಫ್‌ ಕಾರ್ಯಕ್ರಮದಲ್ಲಿ ದೀಪಿಕಾ ಭಾಗಿಯಾಗಿದ್ದರು. ಈ ವೇಳೆ ನೇಹಾ ನೇರವಾಗಿ ದೀಪಿಕಾ ಅವರಿಗೆ ರಣವೀರ್‌ ಸಿಂಗ್‌ ಕಿಸ್ಸಿಂಗ್‌ ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ರಣವೀರ್‌ ಸಿಂಗ್ ಬೆಸ್ಟ್‌ ಕಿಸ್ಸರ್‌ ಎಂದು ದೀಪಿಕಾ ನಗುನಗುತ್ತಲೇ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com