ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸಂಗ್ರಹ ….!

ಬೆಂಗಳೂರು : ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ಕೋರ್ಟ್‌ನ ಪ್ರಾಪರ್ಟಿ ರೂಮಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದ್ದು, ಮೂರು ವರ್ಷಗಳಿಂದ ಈ ಸ್ಫೋಟಕಗಳನ್ನು ವಿಲೇವಾರಿ ಮಾಡದಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.

ಸಿಟಿ ಸಿವಿಲ್‌ ಕೋರ್ಟ್‌ನ ನೆಲಮಾಳಿಗೆಯಲ್ಲಿ 10 ಕೆಜಿಗೂ ಹೆಚ್ಚಿನ ಅಮೋನಿಯಾ ನೈಟ್ರೇಟ್, ಡಿಟೋನೇಟರ್ಸ್‌, ಜಿಲೆಟಿನ್ ಕಡ್ಡಿಗಳು, ಟೈಮರ್‌ಗಳು, ಡಿಿಟಲ್‌ ಸರ್ಕೀಟ್ , ಲ್ಯಾಪ್‌ಟಾಪ್‌ ಜೆಲ್‌ ಸಂಗ್ರಹಿಸಿಡಲಾಗಿದೆ.

ಬಾಂಬ್‌ ನಿಷ್ಕ್ರಿಯ ದಳದ ಹಿರಿಯ ಅಧಿಕಾರಿಯೊಬ್ಬರ ಗಮನಕ್ಕೆ ಬಂದಿದ್ದು, ಇದನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸದ್ದಲಿಂಗ ಪ್ರಭು ಅವರ ಗಮನಕ್ಕೆ ತಂದಿದ್ದಾರೆ. ನ್ಯಾಯಾಧೀಶರು ಕೂಡಲೆ ಇದನ್ನು ಪರಿಶೀಲಿಸಿ ಸ್ಫೋಟಕಗಳನ್ನು ಕೂಡಲೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.

ಸಂಗ್ರಹಿಸಿಡಲಾದ ಸ್ಫೋಟಗಳಿಗೆ ಬೆಂಕಿ ತಗುಲಿ ಸ್ಫೋಟಿಸಿದರೆ ಸಿಟಿ ಸಿವಿಲ್ ಕೋರ್ಟ್‌ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ.

Leave a Reply

Your email address will not be published.

Social Media Auto Publish Powered By : XYZScripts.com