WATCH : ಚಲಿಸುವ ರೈಲಿನೊಂದಿಗೆ Selfie ಸಾಹಸ : ಆಸ್ಪತ್ರೆ ಸೇರಿದ ಯುವಕ..!

ಚಲಿಸುವ ರೈಲಿನೊಂದಿಗೆ ಸೆಲ್ಫೀ ವಿಡಿಯೋ ರೆಕಾರ್ಡ್ ಮಾಡಲು ಹೋದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ತೆಲಂಗಾಣಾ ರಾಜಧಾನಿ ಹೈದರಾಬಾದಿನ ಲಿಂಗಪಲ್ಲಿ ಪ್ರದೇಶದಲ್ಲಿ ಘಟನೆ ನಡೆದಿದೆ. ಇಂದು ಬೆಳಿಗ್ಗಯಷ್ಟೆ ಕಾಶ್ಮೀರದ ಯುವಕನೊಬ್ಬ ರೈಲು ಹಳಿಯ ಮೇಲೆ ಮಲಗಿ ಸಾಹಸ ಪ್ರದರ್ಶಿಸಿದ ವಿಡಿಯೋ ವೈರಲ್ ಆಗಿತ್ತು.

ರೈಲ್ವೇ ಹಳಿಯ ಪಕ್ಕ ನಿಂತುಕೊಂಡು ತನ್ನಡೆಗೆ ಬರುತ್ತಿರುವ ರೈಲಿನೊಂದಿಗೆ ಸೆಲ್ಫೀ ವಿಡಿಯೋ ರೆಕಾರ್ಡ್ ಮಾಡತೊಡಗಿದ್ದಾನೆ. ರೈಲಿಗೆ ತೀರ ಹತ್ತಿರ ನಿಂತುಕೊಂಡಿದ್ದ ಈತನನ್ನು ರೈಲು ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ನಂತರ ಸ್ಥಳದಲ್ಲಿದ್ದ ಸಾರ್ವಜನಿಕರು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

 

Leave a Reply

Your email address will not be published.