ದಕ್ಷಿಣ ಭಾರತದ ಖ್ಯಾತ ನಟಿ “ಆಶಾ ಸುಂದರಿ” ಖ್ಯಾತಿಯ ಕೃಷ್ಣ ಕುಮಾರಿ ಇನ್ನಿಲ್ಲ

ಬೆಂಗಳೂರು : ದಕ್ಷಿಣ ಭಾರತದ ಖ್ಯಾತ ನಟಿ ಕೃಷ್ಣ ಕುಮಾರಿ (84) ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಸಾಹುಕಾರ್‌ ಜಾನಕಿಯವರ ಸಹೋದರಿಯಾಗಿದ್ದ ಕೃಷ್ಣ ಕುಮಾರಿ ಅವರು ಕನ್ನಡ, ತೆಲುಗು. ತಮಿಳು, ಮಲೆಯಾಳಂ ಭಾಷೆಯಲ್ಲಿ ಸುಮಾರು 230ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಕನ್ನಡದಲ್ಲಿ ಡಾ. ರಾಜ್‌ ಕುಮಾರ್ ಅವರೊಂದಿಗೆ, ಎನ್‌ಟಿಆರ್‌, ನಾಗೇಶ್ವರ್ ರಾವ್‌ ಸೇರಿದಂತೆ ಅನೇಕ ನಟರೊಂದಿಗೆ ಅಭಿನಯಿಸಿದ್ದರು. 60-70ರ ದಶಕಗಳಲ್ಲಿ ಜನಪ್ರಿಯ ತಾರೆ ಎನಿಸಿಕೊಂಡಿದ್ದ ಅವರು, ಭಕ್ತ ಕನಕದಾಸ, ಆಶಾ ಸುಂದರಿ, ಶ್ರೀಶೈಲ ಮಹಾತ್ಮೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com