Australian Open : ಟಾಮಸ್ ಬೆರ್ಡಿಕ್ ಪರಾಭವ, ಸೆಮಿಫೈನಲ್‍ಗೆ ಫೆಡರರ್

ಬುಧವಾರ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಮಸ್ ಬೆರ್ಡಿಕ್ ಅವರನ್ನು ಮಣಿಸಿದ ರೋಜರ್ ಫೆಡರರ್ ಸೆಮಿಫೈನಲ್ ತಲುಪಿದ್ದಾರೆ.

ಮೆಲ್ಬರ್ನ್ ನಗರದ ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಸ್ವಿಟ್ಜರ್ಲೆಂಡಿನ ರೋಜರ್ ಫೆಡರರ್, ಟಾಮಸ್ ಬೆರ್ಡಿಕ್ ವಿರುದ್ಧ 7-6(1) 6-3 6-4 ಪಾಯಿಂಟ್ ಗಳಿಂದ ಜಯ ಗಳಿಸಿದ್ದಾರೆ. ಇದರೊಂದಿಗೆ 36 ವರ್ಷದ ರೋಜರ್ ಫೆಡರರ್ 43ನೇ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್ ಪ್ರವೇಶಿಸಿದ್ದಾರೆ.

ಕಳೆದ ಬಾರಿಯ ಚಾಂಪಿಯನ್ ಸಹ ಆಗಿರುವ ರೋಜರ್ ಫೆಡರರ್ ಈ ಬಾರಿಯೂ ಗೆದ್ದು 20ನೇ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಕನಸನ್ನು ಹೊಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com