ಫಸ್ಟ್‌ನೈಟಲ್ಲೇ ಕುಡಿದು ಹೊರಗೆ ಮಲಗಿದ ಪತಿ, ಗಂಡನಂತೆ ಪಕ್ಕದಲ್ಲಿ ಬಂದು ಮಲಗಿದ ಯುವಕ !!

ನೋಮ್‌ಪೆನ್‌ (ಕಾಂಬೋಡಿಯಾ) :  ಮೊದಲ ರಾತ್ರಿ ಪತ್ನಿಯೊಂದಿಗೆ ಸಮಯ ಕಳೆಯ ಬೇಕಾಗಿದ್ದ ವರನೊಬ್ಬ ಕಂಠಪೂರ್ತಿ ಕುಡಿದು ಹೊರಗೆ ಮಲಗಿದ್ದು, ಇದೇ ಸಮಯವನ್ನು ಬಳಿಸಿಕೊಂಡ ಪಕ್ಕದ ಮನೆಯ ಹುಡುಗ ತಾನೇ ವರನಂತೆ ಹೋಗಿ ಫಸ್ಟ್‌ನೈಟ್‌ ಮುಗಿಸಿದ್ದಾನೆ.

ಕಾಂಬೋಡಿಯಾದಲ್ಲಿ ಇಂತಹದ್ದೊಂದು ಘಟನೆ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಬಳಿಕ ಯುವತಿಯ ನೆರೆ ಮನೆಯ ಯುವಕನ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಮತ್ತೊಂದೆಡೆ ರನ ಕಡೆಯವರು ಆಕೆಯನ್ನು ಸೊಸೆ ಎಂದು ಒಪ್ಪಿಕೊಳ್ಳದೆ ಮದುವೆ ರ್ದುಪಡಿಸುವಂತೆ ಮನವಿ ಮಾಡುತ್ತಿದ್ದಾರೆ.

ಮದುವೆಯ ಮೊದಲ ರಾತ್ರಿಯೇ ವರ ಕಂಠಪೂರ್ತಿ ಕುಡಿದು ರೂಮಿನ ಹೊರಗೆ ಬಿದ್ದಿದ್ದ. ಇದನ್ನು ನೋಡಿದ ನೆರೆ ಮನೆಯ ಯುವಕ ವಧುವಿದ್ದ ರೂಮಿನೊಳಗೆ ಹೋಗಿದ್ದಾನೆ. ರೂಮಿನಲ್ಲಿ ಕತ್ತಲೆ ಇದ್ದ ಕಾರಣ ವಧುವಿಗೆ ಗೊತ್ತಾಗದೆ ಪತಿಯೇ ಬಂದಿರುವುದು ತಿಳಿದಿದ್ದಾಳೆ.

ಇದೇ ಸಂದರ್ಭವನ್ನು ಬಳಸಿಕೊಂಡ ಯುವಕ ನವ ವಧುವಿನ ಜೊತೆ ಸರಸವಾಡಿದ್ದಾನೆ. ಬಳಿಕ ವಧುವಿಗೆ ಈ ವಿಚಾರ ಗೊತ್ತಾಗಿದ್ದು, ಈ ಹೊತ್ತಿಗಾಗಲೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ತನ್ನದಲ್ಲದ ತಪ್ಪಿಗೆ ವಧು ಪರಿತಪಸುವಂತಾಗಿದೆ.

 

Leave a Reply

Your email address will not be published.