ಗುರುವಾರ ಕರ್ನಾಟಕ ಬಂದ್‌ : ಏನೇನು ಸಿಗುತ್ತದೆ, ಏನೇನು ಸಿಗಲ್ಲ…..

ಬೆಂಗಳೂರು : ಮಹದಾಯಿ ನದಿ ಯೋಜನೆಗಾಗಿ ಆಗ್ರಹಿಸಿ ಜನವರಿ 25ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ನಾಳೆ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ ಕೆಲ ಕನ್ನಡ ಪರ ಸಂಘಟನೆಗಳ ಮಧ್ಯೆಯೇ ಅಸಮಾಧಾನವಿರುವ ಕಾರಣ ಅನೇಕ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ.
ರಾಜ್ಯದಲ್ಲಿ ನಾಳೆ ಏನೇನು ಸಿಗುವುದಿಲ್ಲ / ಇರುವುದಿಲ್ಲ
ಎಪಿಎಂಸಿ ಮಾರುಕಟ್ಟೆ. ಖಾಸಗಿ ಶಾಲೆಗಳಿಗೆ ರಜೆ, ಬೆಂಗಳೂರು ವಿವಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ನಾಳೆ ನಡೆಯಬೇಕಿದ್ದ ಪ್ರಥಮ ವರ್ಷದ ಪರೀಕ್ಷೆಗಳು ಫೆಬ್ರವರಿ 8ರಂದು ನಡೆಯಲಿದೆ. 3ನೇ ವರ್ಷದ ಬಿಎ, ಬಿಎಸ್‌ಸಿ ಪರೀಕ್ಷೆಗಳನ್ನು ಫೆಬ್ರವರಿ 5ಕ್ಕೆ ಮುಂದೂಡಲಾಗಿದೆ.
 ಧಾರವಾಡದಲ್ಲಿ ಸರ್ಕಾರಿ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಇನ್ನು ಪರಿಸ್ಥಿತಿಯನ್ನಾಧರಿಸಿ ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
ಕರ್ನಾಟಕ ಬಂದ್‌ಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬೆಂಬಲ ನೀಡಿಲ್ಲವಾದರೂ ಬಸ್‌ಗೆ ಕಲ್ಲು ತೂರಾಟ ಸೇರಿದಂತೆ ಯಾವುದೇ ಆಸ್ತಿ ಪಾಸ್ತಿಗೆ ಹಾನಿ ಉಂಟಾಗುವ ಸಂಭವವಿದ್ದರೆ ಸುರಕ್ಷತಾ ದೃಷ್ಠಿಯಿಂದ ಬಸ್‌ ಹಾಗೂ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಶಿವಮೊಗ್ಗದಲ್ಲಿ ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಯನ್ನು ಫೆಬ್ರವರಿ 21ಕ್ಕೆ ಮುಂದೂಡಲಾಗಿದೆ. ಹೋಟೆಲ್‌, ರೆಸ್ಟೋರೆಂಟ್‌ ಬಂದ್‌ ಆಗಲಿದೆ. ಕ್ಯಾಬ್‌ಗಳು ಸಿಗೋದಿಲ್ಲ.
 ಬೆಂಗಳೂರಿನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದ್ದು, 50 ಕೆಎಸ್‌ಆರ್‌ಪಿ ತುಕಡಿ, 15 ಸಾವಿರ ಪೊಲೀಸರು, ಹೋಮ್‌ ಗಾರ್ಡ್ಸ್‌, ಕೆಎಆರ್‌ ತುಕಡಿ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ. ಸುನಿಲ್ ಕುಮಾರ್‌ ಹೇಳಿದ್ದಾರೆ.
ಬಂದ್‌ಗೆ ಬೆಂಬಲ ಸೂಚಿಸಿರುವ ಸಂಘಟನೆಗಳು
ವಾಟಾಳ್‌ ಪಕ್ಷ, ಹಮಾಲಿಗಳ ಸಂಘ, ಕರವೇ ಸಂಘಟನೆ, ರಾಜ್‌ ಕುಮಾರ್ ಅಭಿಮಾನಿಗಳ ಸಂಘ, ಚಿಕ್ಕಬಳ್ಳಾಪುರ ಶಾಶ್ವತ ಹೋರಾಟಗಾರರ ಸಂಘ, ಹಸಿರು ಸೇನೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ವಕೀಲರ ಸಂಘ, ಲಾರಿ ಮಾಲೀಕರ ಸಂಘ, ಬಿಬಿಎಂಪಿ ಕಾರ್ಮಿಕರ ಸಂಘ, ಸಾಹಿತ್ಯ ಪರಿಷತ್‌, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಕ್ರಿಯಾ ಸಮಿತಿ, ಹೋಟೆಲ್‌ ಮಾಲೀಕರ ಸಂಘ, ಆರ್‌ಎಂಸಿ ಯಾರ್ಡ್‌
ಬೆಂಬಲ ಸೂಚಿಸದ ಸಂಘಟನೆಗಳು
ಅಖಿಲ ಕನ್ನಡ ಚಳುವಳಿ ಸಮಿತಿ, ಕರ್ನಾಟಕ ಕಾರ್ಮಿಕ ವೇದಿಕೆ, ಕರ್ನಾಟಕ ಸಂಘಟನೆಗಳ ಒಕ್ಕೂಟ.

Leave a Reply

Your email address will not be published.

Social Media Auto Publish Powered By : XYZScripts.com