3 ವರ್ಷದ ಮಗನನ್ನು ಉಲ್ಟಾ ನೇತು ಹಾಕಿ ರಕ್ತ ಬರುವಂತೆ ಬೆಲ್ಟ್‌ನಿಂದ ಥಳಿಸಿದ ನಿರ್ದಯಿ ತಂದೆ…!

ಭೋಪಾಲ್‌ : ಮಲತಂದೆಯೊಬ್ಬ 3 ವರ್ಷದ ಮಗುವನ್ನು ತಲೆಕೆಳಗಾಗಿ ನೇತು ಹಾಕಿ ರಕ್ತಬರುವಂತೆ ಹೊಡೆದಿರುವ ಅಮಾನವೀಯ ಘಟನೆ ಮಧ್ಯಪ್ರದೇಶ ಶಾಜಾಪುರಂನಲ್ಲಿ ನಡೆದಿದೆ.

ಮಗುವಿಗೆ 10ರವರೆಗೆ ಸಂಖ್ಯೆ ಎಣಿಸಲು ಬರಲಿಲ್ಲ ಎಂಬ ಕಾರಣ ನೀಡಿ ಪಾಪಿ ತಂದೆ ಧರ್ಮೇಂದ್ರ ನಿರ್ದಯವಾಗಿ ಮಗುವಿಗೆ ಥಳಿಸಿದ್ದಾನೆ. ತಾಯಿ ಮಧ್ಯ ಪ್ರವೇಶಿಸಲು ಪ್ರಯತ್ನಿಸಿದ್ದಕ್ಕೆ ಆಕೆಗೂ ಥಳಿಸಿ ಅಮಾನವೀಯತೆ ಮೆರೆದಿದ್ದಾನೆ. ಮಗುವಿನ ಕಿರುಚಾಟ ಕೇಳಿ ನೆರೆಹೊರೆಯವರು ಬಂದು ಬಾಲಕನನ್ನು ರಕ್ಷಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.

ಕೂಡಲೆ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ತಂದೆ ಪರಾರಿಯಾಗಿದ್ದಾನೆ. ಮಗುವಿಗೆ ತೀವ್ರ ರಕ್ತಸ್ರಾವವಾಗುತ್ತಿದ್ದುದನ್ನು ನೋಡಿದ ಪೊಲೀಸರು ಕೂಡಲೆ ಆಸ್ಪತ್ರೆಗ ದಾಖಲಿಸಿದ್ದಾರೆ. ಮಗುವಿನ ಸ್ಥಿತಿ ಚಿಂತಾಜನಕವಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

ಮಗುವಿಗೆ 10ರವರೆಗೆ ಎಣಿಸಲು ಹೇಳಿದ್ದಾನೆ. ಆದರೆ ಬಾಲಕನಿಗೆ ಎಣಿಸಲು ಬರಲಿಲ್ಲ. ಇಷ್ಟಕ್ಕೆ ಮಗುವನ್ನು ತಲೆಕೆಳಗಾಗಿ ನೇತು ಹಾಕಿ ಮನಸೋ ಇಚ್ಛೆ ಥಳಿಸಿದ್ದಾನೆ. ಮಗುವಿನ ಹೊಟ್ಟೆ, ತಲೆ, ಮುಖದ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದೆ.

ತಂದೆಯ ವಿರುದ್ದ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡರುವ ಧರ್ಮೇಂದ್ರನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com