ಮೇವು ಹಗರಣ : ಮೂರನೇ Case ನಲ್ಲೂ ಲಾಲೂ ದೋಷಿ ಎಂದ ಕೋರ್ಟ್‌

ರಾಂಚಿ : ಈಗಾಗಲೆ ಜೈಲು ಪಾಲಾಗಿರುವ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್‌ ಮೇವು ಹಗರಣದ ಮೂರನೇ ಪ್ರಕರಣದಲ್ಲೂ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಇದರಿಂದಾಗಿ ಲಾಲೂ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಈಗಾಗಲೆ ಮೇವು ಹಗರಣದಲ್ಲಿ ಲಾಲೂ ಜೈಲುವಾಸ ಅನುಭವಿಸುತ್ತಿದ್ದು, ಮೂರನೇ ಪ್ರಕರಣದ ಶಿಕ್ಷೆಯ ಅವಧಿಯನ್ನು ಜನವರಿ 25ರಂದು ಪ್ರಕಟಿಸಲಿದೆ.

1990 ರಲ್ಲಿ ಚೈಬಾಸಾ ಖಜಾನೆಯಿಂದ ಹಣ ಲೂಟಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಮಂಜೂರಾಗಿದ್ದ 7.1 ಲಕ್ಷಕ್ಕೆ ಬದಲಾಗಿ 33.7 ಕೋಟಿ ರೂಗಳನ್ನು ಖಜಾನೆಯಿಂದ ಲಾಲೂ ತೆಗೆದಿದ್ದರು ಎಂದು ಆರೋಪಿಸಲಾಗಿದೆ.
ಅಲ್ಲದೆ ಬಿಹಾರದ ಮಾಜಿ ಸಿಎಂ ಜಗನ್ನಾಥ್‌ ಮಿಶ್ರಾ ಅವರನ್ನೂ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

Leave a Reply

Your email address will not be published.

Social Media Auto Publish Powered By : XYZScripts.com