Cricket-3rd Test : ಭಾರತ 187ಕ್ಕೆ ಆಲೌಟ್ : ಕೊಹ್ಲಿ, ಪೂಜಾರ ಅರ್ಧಶತಕ

ಜೋಹಾನೆಸ್ ಬರ್ಗ್ ನ ವಾಂಡರರ್ಸ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್ ಗಳ ದಾಳಿಗೆ ಸಿಕ್ಕ ಭಾರತ ಅಲ್ಪ ಮೊತ್ತಕ್ಕೆ ಕುಸಿದಿದೆ.

ಟಾಸ್ ಗದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 187ಕ್ಕೆ ಆಲೌಟ್ ಆಯಿತು. ನಾಯಕ ವಿರಾಟ್ ಕೊಹ್ಲಿ (54) ಹಾಗೂ ಚೇತೇಶ್ವರ ಪೂಜಾರ (50) ಅರ್ಧಶತಕ ಬಾರಿಸಿ ಕೊಂಚ ಪ್ರತಿರೋಧ ತೋರಿದರು. ರೋಹಿತ್ ಬದಲಿಗೆ ಸ್ಥಾನ ಪಡೆದಿರುವ ಅಜಿಂಕ್ಯ ರಹಾನೆ 9 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾದ ಪರವಾಗಿ ಕಗಿಸೋ ರಬಾಡಾ 3, ವೆರ್ನನ್ ಫಿಲ್ಯಾಂಡರ್ 2, ಮಾರ್ನ್ ಮಾರ್ಕೆಲ್ 2 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ 1 ವಿಕೆಟ್ ಕಳೆದುಕೊಂಡು 6 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸಮನ್ ಡೀನ್ ಎಲ್ಗರ್ (4*) ಹಾಗೂ ನೈಟ್ ವಾಚಮನ್ ಆಗಿ ಬಂದಿರುವ ಕಗಿಸೋ ರಬಾಡಾ (0*) ಅಜೇಯರಾಗುಳಿದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com