ಕಾಂಗ್ರೆಸ್‌ನಲ್ಲಿ ರಾಮನೂ ಇದ್ದಾನೆ ಅಲ್ಲಾನೂ ಇದ್ದಾನೆ : ಸಚಿವ H ಆಂಜನೇಯ

ಚಿತ್ರದುರ್ಗ : ಕಾಂಗ್ರೆಸ್‌ನಲ್ಲಿ ರಾಮ ಹಾಗೂ ಅಲ್ಲಾ ಇಬ್ಬರೂ ಇದ್ದಾರೆ ಎಂದು ಸಚಿವ ಎಚ್‌. ಆಂಜನೇಯ ಹೇಳಿದ್ದಾರೆ.

ಚಿತ್ರದುರ್ಗದ ಸರ್ಕಾರಿ ಕಾಲೇಜು ಕಟ್ಟಡ ಕಾಮಗಾರಿ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಆರೋಪ ಮಾಡೋಕೆಂದು ಬಿಜೆಪಿಯವರು ಹುಟ್ಟಿದ್ದಾರೆ. ಮಹದಾಯಿ ವಿಚಾರವಾಗಿ ನಡೆಯುತ್ತಿರುವ ಬಂದ್‌ ಶಾಂತಿಯುತವಾಗಿ ನಡೆಯಬೇಕಿದೆ. ಕಾಂಗ್ರೆಸ್‌ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ. ಅವರವರ ರಾಜ್ಯಕ್ಕೆ ಬೇಕಾದಂತೆ ಅವರೇನು ಮಾಡಿಕೊಳ್ಳುತ್ತಾರೋ ನಮ್ಮ ರಾಜ್ಯಕ್ಕೆ ಬೇಕಾದುದನ್ನು ನಾವು ಮಾಡಿಕೊಳ್ಳಬೇಕು. ತಂತಮ್ಮ ರಾಜ್ಯದ ಹಿತ ಕಾಯಲು ಎಲ್ಲರಿಗೂ ಸ್ವಾತಂತ್ರ್ಯವಿದೆ ಎಂದಿದ್ದಾರೆ.

ಇನ್ನು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಕುರಿತಂತೆ ಮಾತನಾಡಿದ ಅವರು, ದಲಿತರಿಗೆ ಸ್ಮಶಾನ ನೀಡುವ ವಿಚಾರದಲ್ಲಿ ಅವರು ನಿರ್ಲಕ್ಷ್ಯ ತೋರಿದ್ದು, ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಆದ್ದರಿಂದ ಸ್ಥಳೀಯರ ವಿರೋಧದಿಂದ ಇದೆಲ್ಲ ಆಗಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com