BIGGBOSS : ಮನೆಯಲ್ಲಿ ಕಣ್ಣೀರಿಟ್ಟ Rapper ಚಂದನ್‌ ಶೆಟ್ಟಿ…ಯಾಕೆ ?

ಬಿಗ್‌ಬಾಸ್‌ ಕನ್ನಡ ಸೀಸನ್ 5ರ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವೇ ದಿನ ಬಾಕಿ ಉಳಿದಿದೆ. ಮನೆಯಲ್ಲಿ ಇನ್ನು ಕೇವಲ ಐದು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದು, ಎಲ್ಲರೂ ಗೆಲುವಿನ ಸಮೀಪದಲ್ಲಿದ್ದಾರೆ.

ಇನ್ನು ಮನೆಯಲ್ಲಿರು ಸ್ಟ್ರಾಂಗ್‌ ಕಂಟಸ್ಟಂಟ್‌ಗಳ ಪೈಕಿ ಚಂದನ್‌ ಶೆಟ್ಟಿ ಸಹ ಒಬ್ಬರು. ಇನ್ನು ಬಿಗ್‌ಬಾಸ್‌ ಮನೆಯಿಂದ ಹೊರಬಂದ ಸ್ಪರ್ಧಿಗಳೆಲ್ಲರೂ ಚಂದನ್‌ ಫೈನಲ್‌ನಲ್ಲಿ ಉಳಿದುಕೊಳ್ಳುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಎಲ್ಲರ ಅನಿಸಿಕೆ ನಿಜವಾಗಿದ್ದು ಚಂದನ್‌ ಫೈನಲ್‌ ತಲುಪಿದ್ದಾರೆ. ಆದರೆ ಇದೇ ಮನೆಯಲ್ಲಿ ಚಂದನ್ ಕಣ್ಣೀರಿಟ್ಟಿದ್ದಾರೆ. ಎಂತಹ ಸಂದರ್ಭದಲ್ಲಿಯೂ ಗಟ್ಟಿಯಿದ್ದು ಎಲ್ಲರನ್ನೂ ಸಂತೈಸುತ್ತಿದ್ದ ಅವರು, ಬಿಗ್‌ಬಾಸ್‌ ಮನೆಯಲ್ಲಿ ಚಂದನ್‌ ಮೊದಲ ಬಾರಿಗೆ ಭಾವುಕರಾಗಿದ್ದರುಯ ಕನ್ಫೆಷನ್‌ ರೂಮಿನಲ್ಲಿ ಕುಳಿತ ಚಂದನ್‌ ದುಃಖ ತಪ್ತವಾಗಿ ಮಾತನಾಡಿದರು. ಬಿಗ್‌ಬಾಸ್‌ ಒಂದು ಶೋ ಮಾತ್ರವಲ್ಲ. ಇದು ಜೀವನ ಕಲಿಸೋ ಪಾಠ. ವ್ಯಕ್ತಿತ್ವ ರೂಪಿಸೋ ಗುರುಕುಲ. ನನಗೆ ಇದೆಲ್ಲವನ್ನು ನೀಡಿದ್ದು ಬಿಗ್‌ಬಾಸ್‌. ಬಿಗ್‌ಬಾಸ್‌ ಬರುವುದಕ್ಕೂ ಮುನ್ನ ನಾನು ತೆರೆಮರೆ ಕಾಯಿಯಂತೆ ಇದ್ದೆ. ಆದರೆ ಇಲ್ಲಿ ಬಂದ ಮೇಲೆ ನಾನು ಯಾರು ಎಂದ ಜನರಿಗೆ ಗೊತ್ತಾಗಿದೆ. ಕನ್ನಡದ ಜನತೆ ಪ್ರೀತಿಯಿಂದ ವೋಟ್‌ ಮಾಡಿ ನನ್ನನ್ನು ಇಲ್ಲಿಯವರೆಗೂ ತಂದಿದ್ದಾರೆ. ದೇವರಿಗೆ ಕೈ ಮುಗಿಯುವಂತೆ ಜನರಿಗೂ ಕೈ ಮುಗಿಯುತ್ತೇನೆ ಎಂದಿದ್ದಾರೆ.

Leave a Reply

Your email address will not be published.