ಮಹದಾಯಿ ಉ.ಕ ದ ಸಮಸ್ಯೆ, ದಕ್ಷಿಣದವರು ಪ್ರತಿಭಟನೆ ಮಾಡುವ ಅಗತ್ಯವಿಲ್ಲ : ಸದಾನಂದಗೌಡ

ಬೆಂಗಳೂರು : ಮಹದಾಯಿ ಉತ್ತರ ಕರ್ನಾಟಕಕ್ಕೆ ಸಂಬಂಧಪಟ್ಟ ವಿಚಾರ. ಇದನ್ನು ಸುಮ್ಮನೆ ರಾಜ್ಯವ್ಯಾಪಿ ವಿಸ್ತಾರ ಮಾಡಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಸದಾನಂದಗೌಡರು, ಮಹದಾಯಿ ಉತ್ತರ ಕರ್ನಾಟಕಕ್ಕೆ ಸಂಬಂಧಪಟ್ಟ ವಿಚಾರ. ದಕ್ಷಿಣ ಕರ್ನಾಟಕದ ಜನತೆಗೂ ಬಂದ್‌ಗೂ ಸಂಬಂಧವಿಲ್ಲ. ನಮ್ಮ ಹಕ್ಕಿನ ವಿಚಾರ ಬಂದಾಗ ಪ್ರಜಾತಂತ್ರ ವ್ಯವಸ್ಥೆಯಲ್ಲಿ  ಪ್ರತಿಭಟನೆ ಮಾಡುವ ಅವಕಾಶವಿದೆ. ಆದರೆ ಇದು ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧ ಪಟ್ಟ ವಿಚಾರವಾಗಿರುವುದರಿಂದ ದಕ್ಷಿಣ ಕರ್ನಾಟಕದ ಜನ ಅಷ್ಟೊಂದು ಒತ್ತುಕೊಡುವ ಅಗತ್ಯವಿಲ್ಲ ಎಂಬುದು ನನ್ನ ಅನಿಸಿಕೆ ಎಂದಿದ್ದಾರೆ.

ಕಾವೇರಿ ನದಿ ನೀರಿನ ವಿಷಯದಲ್ಲಿ ಉತ್ತರ ಕರ್ನಾಟಕದ ಯಾರೂ ದೊಡ್ಡ ರೀತಿಯಲ್ಲಿ ನಮ್ಮ ಪರ ಹೋರಾಟ ಮಾಡಲಿಲ್ಲ. ಮಹದಾಯಿ ಹೋರಾಟವನ್ನು ಉತ್ತರ ಕರ್ನಾಟಕಕ್ಕೆ ಸೀಮಿತವಾಗಿ ನೋಡಬೇಕು ಎಂದಿದ್ದಾರೆ.

One thought on “ಮಹದಾಯಿ ಉ.ಕ ದ ಸಮಸ್ಯೆ, ದಕ್ಷಿಣದವರು ಪ್ರತಿಭಟನೆ ಮಾಡುವ ಅಗತ್ಯವಿಲ್ಲ : ಸದಾನಂದಗೌಡ

  • January 25, 2018 at 9:59 PM
    Permalink

    Hye sadananda gouda hege ide ri nimge hagidre next election nalli nimge uttarkaranatak janagal mata bedva,

    Reply

Leave a Reply

Your email address will not be published.

Social Media Auto Publish Powered By : XYZScripts.com