Mumbai : ಭಾಷಣ ಮಾಡುತ್ತಿದ್ದ ಓವೈಸಿಯತ್ತ ಚಪ್ಪಲಿ ಎಸೆದ ವ್ಯಕ್ತಿ..!

ಮುಂಬೈನಲ್ಲಿ ಎಐಎಮ್ ಐಎಮ್ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ದಕ್ಷಿಣ ಮುಂಬೈನ ನಾಗಪಾಡಾ ಪ್ರದೇಶದಲ್ಲಿ ಅಸಾದುದ್ದೀನ್ ಓವೈಸಿ ರ್ಯಾಲಿಯನ್ನು ಸಂಬೋಧಿಸಿ ಮಾತನಾಡುತ್ತಿದ್ದರು. ಆಗ ಜನರ ನಡುವೆ ನಿಂತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿಂದ್ದಂತೆ ಓವೈಸಿ ಅವರತ್ತ ಚಪ್ಪಲಿ ಎಸೆದಿದ್ದಾನೆ.

ಆದರೆ ಚಪ್ಪಲಿ ಓವೈಸಿಗೆ ತಾಗದೇ ಪಕ್ಕಕ್ಕೆ ಹೋಗಿ ಬಿದ್ದಿದೆ. ಇದರಿಂದಾಗಿ ಕಾರ್ಯರ್ತರಲ್ಲಿ ಕೆಲವು ಕಾಲ ಗದ್ದಲದ ವಾತಾವರಣ ನಿರ್ಮಾಗೊಂಡಿತ್ತು. ಚಪ್ಪಲಿ ಎಸೆದ ಸಮಯದಲ್ಲಿ ಓವೈಸಿ ತ್ರಿವಳಿ ತಲಾಖ್ ಬಗ್ಗೆ ಮಾತನಾಡುತ್ತಿದ್ದರು.

ಘಟನೆಯ ನಂತರ ಮಾತನಾಡಿದ ಓವೈಸಿ ‘ ನಾನು ನನ್ನ ಸಾಂವಿಧಾನಿಕ ಹಕ್ಕಿಗಾಗಿ ಪ್ರಾಣವನ್ನೇ ಅರ್ಪಿಸಲು ಸಿದ್ಧನಿದ್ದೇನೆ. ಸತ್ಯವನ್ನು ನುಡಿಯುವುದರಿಂದ ತಡೆಯಲು ನಮ್ಮನ್ನು ಸಾಧ್ಯವಿಲ್ಲ ‘ ಎಂದು ಹೇಳಿದ್ದಾರೆ.

Leave a Reply

Your email address will not be published.