ಈ ಮೂರು ರಾಶಿಯವರು ಈ ವರ್ಷ ಪ್ರೀತಿಯಲ್ಲಿ ಮೋಸ ಹೋಗ್ತಾರಂತೆ…..ಎಚ್ಚರ…!

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಹಣ, ನೆಮ್ಮದಿ, ಪ್ರೀತಿ, ಆರೋಗ್ಯ ಇದಿಷ್ಟು ಬಹು ಮುಖ್ಯವೆನಿಸುತ್ತದೆ. ಹಣವನ್ನು ಕಳೆದುಕೊಂಡರೆ ಬದುಕಬಹುದು ಆದರೆ ಪ್ರೀತಿ, ನೆಮ್ಮದಿ, ಆರೋಗ್ಯ ಕಳೆದುಕೊಂಡರೆ ಬದುಕು ದುಸ್ತರವಾಗುತ್ತದೆ.

ನಮ್ಮ ಜೀವನದಲ್ಲಿ ನಾವು ಪಡೆಯುವ ಪ್ರೀತಿ, ವಾತ್ಸಲ್ಯ ನಮ್ಮ ಕುಂಡಲಿನಿಯನ್ನಾಧರಿಸಿರುತ್ತದೆ. ಕುಂಡಲಿನಿಯಲ್ಲಿ ಸಂಚರಿಸುವ ಗ್ರಹಗತಿಗಳು ವಿಭಿನ್ನ ಪರಿಣಾಮ ಬೀರುತ್ತವೆ. ಇದರ ಆಧಾರದ ಮೇಲೆ ವ್ಯಕ್ತಿಯ ವರ್ತನೆ ಬದಲಾಗುತ್ತದೆ.

2018ರಲ್ಲಿ ಗ್ರಹಗತಿಗಳು ವಿಭಿನ್ನ ತಿರುವನ್ನು ಪಡೆದಿವೆ. ಇದರ ಅನ್ವಯ ಕೆಲ ರಾಶಿ ಚಕ್ರದವರು ಲಾಭ ಅನುಭವಿಸಲಿದ್ದಾರೆ. ಇನ್ನು ಕೆಲವರು ಪ್ರೀತಿಯಲ್ಲಿ ಸೋಲನುಭವಿಸಲಿದ್ದಾರೆ. ಹಾಗಾದರೆ ಆ ರಾಶಿಗಳ್ಯಾವುವು ಎಂಬುರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಿಥುನ : 2017 ಅಂತ್ಯದಲ್ಲಿ ಶನಿ ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಮುಂದಿನ ಎರಡು ವರ್ಷ ಕಾಲ ಇದು ಹೀಗೆಯೇ ಮುಂದುವರಿಯಲಿದೆ. ಇದರ ಪರಿಣಾಮ ವಯಕ್ತಿಯ ಪ್ರೀತಿ ಹಾಗೂ ಸಂಬಂಧದ ಮೇಲೆ ಪರಿಣಾಮ ಉಂಟಾಗುತ್ತದೆ. ಈ ರಾಶಿಯವರ ಜೀವನದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಹೆಚ್ಚುತ್ತದೆ. ಈ ರಾಶಿಯವರು ಇತರರಲ್ಲಿ ತನ್ನತನವನ್ನು ಹುಡುಕುವುದರಿಂದ ಬೇಗ ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೀತಿಯ ಹುಡುಕಾಟದಲ್ಲಿರುವವರು ಎಚ್ಚರ ವಹಿಸಿದರೆ ಒಳ್ಳೆಯದು.

ತುಲಾ : ಈ ವರ್ಷ ನಿಮ್ಮ ಜೀವನವನ್ನು ಹೇಗೆ ಸಮತೋಲನದಿಂದ ತೆಗೆದುಕೊಂಡು ಹೋಗಬೇಕು ಎಂಬುದು ತಿಳಿಯುತ್ತದೆ. ನಿರಾಶೆಯ ಬದುಕು ನಿಮ್ಮನ್ನು ಕಾಡಲಿದೆ. ಸಮಸ್ಯೆ ಹಾಗೂ ಸನ್ನಿವೇಶವನ್ನು ಸರಿಯಾಗಿ ತೂಗಿಸಿಕೊಂಡು ಹೋಗುವಂತಹ ಜಾಣ್ಮೆ ಇರಬೇಕಾಗುತ್ತದೆ. ಈ ವರ್ಷ ನಿಮ್ಮ ಜೀವನದಲ್ಲಿ ಸುಖಕ್ಕಿಂತ ದುಃಖವೇ ಹೆಚ್ಚು. ನಿಮ್ಮ ಆದರ್ಶಗಳು ನಿಮಗೆ ಕೈ ಕೊಡಲಿವೆ. ನೀವು ನಬಿರುವವರು ನಿಮ್ಮ ಭಾವನೆಗಳ ಜೊತೆ ಆಟವಾಡಬಹುದು. ಆಂತರಿಕ ತೊಳಲಾಟ ಹೆಚ್ಚಿರುತ್ತದೆ.

ವೃಶ್ಚಿಕ : ನಿಮ್ಮ ಪ್ರೀತಿಯನ್ನು ನೀವೇ ಕಳೆದುಕೊಳ್ಳುತ್ತೀರಿ. ನಿಮಗೆ ನೀವೇ ನೋವುಂಟು ಮಾಡಿಕೊಳ್ಳುವ ಸಂಭವ ಹೆಚ್ಚು. ಸುತ್ತಮುತ್ತಲ ಜನರಿಂದ ಹೆಚ್ಚಿನ ನೋವನುಭವಿಸುವಂತಾಗುತ್ತದೆ. ನಿಮ್ಮ ಮನಸ್ಸನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳಲು ಬೇಕಾದ ಪ್ರಯತ್ನ ಮಾಡಬೇಕಾಗುತ್ತದೆ. ಗ್ರಹಗತಿಗಳ ಬದಲಾವಣೆಯಿಂದ ನಷ್ಟ ಅನುಭವಿಸಬೇಕಾಗುತ್ತದೆ. ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಅರಿವಿರಬೇಕು. ವರ್ಷಾಂತ್ಯದಲ್ಲಿ ನಿಮ್ಮ ಗ್ರಹಗತಿಗಳು ಉತ್ತಮ ಫಲಿತಾಂಶ ನೀಡಲಿವೆ.

 

 

Leave a Reply

Your email address will not be published.

Social Media Auto Publish Powered By : XYZScripts.com