ಯಡಿಯೂರಪ್ಪ ಮಹಾನ್ ಸುಳ್ಳುಗಾರ, ಒಂದೇ ಒಂದು ಸತ್ಯ ಹೇಳಿಲ್ಲ : CM

ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಹೇಳಿಕೆ ನೀಡಿದ್ದಾರೆ. ‘ ನನಗೆ ರಾಜ್ಯ ಪ್ರವಾಸದಲ್ಲಿ ಯಾವ ಸಮಸ್ಯೆಗಳು ಕಂಡಿಲ್ಲ ಸಂವಿಧಾನದಲ್ಲಿ ಈ ರೀತಿ ಎಲ್ಲಾದರೂ ಹೇಳಿದ್ದಾರಾ? ಸಂವಿಧಾನವನ್ನ ಓದಿಕೊಳ್ಳಬೇಕಲ್ಲವೇ? ಬಿ.ಎಸ್.ಯಡಿಯೂರಪ್ಪ ಅವರಿಗೆ ಯಾವ ಸಂವಿಧಾನದಲ್ಲಿ ಹೇಳಿದೆಯಂತೆ..? ‘ ಎಂದು ಕೇಳಿದ್ದಾರೆ.

ಕಳೆದ ಬಾರಿ ಜಗದೀಶ ಶೆಟ್ಟರ್ ಮಂಡಿಸಿದ್ರಲ್ಲಾ ಅದಕ್ಕೇನೂ ಹೇಳ್ತೀರಿ. ಜಗದೀಶ್ ಶೆಟ್ಟರ್ ಭ್ರಷ್ಟ, ಬಿಜೆಪಿ ನಾಶ ಮಾಡುವುದು ನನ್ನ ಉದ್ದೇಶ ಅಂದಿದ್ದರು. ಬಿಜೆಪಿಯವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ, ಬಿಜೆಪಿ ಅವರು ಈಗಾಗಲೇ ಸೋತು ಬಿಟ್ಟಿದ್ದಾರೆ. ನನ್ನ ಮೇಲೆ ಕೇಸ್ ಇದ್ದರೆ ಕೋರ್ಟ್ ಗೆ ಹೋಗಲಿ. ಸುಮ್ಮನೆ ಪುಂಗಿ ಊದ್ತಾರೆ

‘ ಅಮಿತ್ ಶಾ ಅವರು ಮೈಸೂರಿಗೆ ಬಂದು ಚಾರ್ಜ್ ಶೀಟ್ ಓಪನ್ ಮಾಡುವ ವಿಚಾರವಾಗಿ ಮಾತನಾಡಿದ ಸಿಎಂ, ಯಡಿಯೂರಪ್ಪ ಮಹಾನ್ ಸುಳ್ಳುಗಾರ. ಒಂದೇ ಒಂದು ಸತ್ಯ ಹೇಳಿಲ್ಲ ‘ ಎಂದರು. ಎಸಿಬಿ ಮುಖಾಂತರ ಮುಚ್ಚು ಹಾಕುವ ಹುನ್ನಾರಕ್ಕೆ ತಿರುಗೇಟು ನೀಡಿದ ಸಿಎಂ ಅದೆಲ್ಲಾ ಸಾಧ್ಯಾನ ಅಂತ ಪ್ರಶ್ನಿಸಿದರು.

ನಾನು ಲಾಯರ್ ಆಗಿದ್ದವನು‌. ಲಾ ಓದದೆ ಇರುವವರೆಲ್ಲ ಲಾ ತಿಳಿದುಕೊಳ್ಳಬಾರದೆಂಬುದಿಲ್ಲ. ಮರ್ಡರ್ ಕೇಸ್ ಗೆ ಜೀವಾವಧಿ ಶಿಕ್ಷೆ ಇದೆ ಅಂತ ಗೊತ್ತಿರಲಿಲ್ಲ ಅಂತ ಹೇಳಿದ್ರೆ ಶಿಕ್ಷೆಯಿಂದ ವಿಮುಖ ಮಾಡ್ತಾರಾ? ಅಮಿತ್ ಶಾ ಕೂಡ ಸುಳ್ ಹೇಳ್ತಾರೆ. ಅವರಿಗೂ ಕೂಡ ಒಳ್ಳೆ ಚಾರಿತ್ರ್ಯವಿಲ್ಲ. ಅವರಿಗಿರುವ ಅಜ್ಞಾನಕ್ಕೆ ನಗಬೇಕೋ, ಅಳಬೇಕೋ. ಕನ್ನಡ ಚಳವಳಿಗಳು ಪಕ್ಷ ಕೇಳಿ ಪ್ರತಿಭಟನೆ ಮಾಡ್ತಾವಾ..? ಪ್ರತಿಭಟನೆಯಿಂದ ರಾಜ್ಯ ಸರ್ಕಾರಕ್ಕೆ ಅಲ್ಲವೇ ತೊಂದರೆ

ರೋಹಿಣಿಯವರ ವರ್ಗಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ‘ ಟ್ರಾನ್ಸ್ ಫರ್ ಮಾಡುವುದು ಸರ್ಕಾರದ ಅಧಿಕಾರ. ಆಡಳಿತದ ದೃಷ್ಠಿಯಿಂದ ಮಾಡಲಾಗಿದೆ’  ಎಂದರು.

Leave a Reply

Your email address will not be published.

Social Media Auto Publish Powered By : XYZScripts.com