‘ನಮಗೆ ರಾಮ, ಅಲ್ಲಾಹು, ಏಸು ಬೇರೆ ಬೇರೆ ಅಲ್ಲ’ : ಸುನಿಲ್ ಕುಮಾರ್ ಹೇಳಿಕೆಗೆ ರೈ ಕಿಡಿ

ಬಂಟ್ವಾಳದಲ್ಲಿ ಸಚಿವ ರಮನಾಥ್ ರೈ ಹೇಳಿಕೆ ನೀಡಿದ್ದಾರೆ. ಶಾಸಕ ಸುನೀಲ್ ಕುಮಾರ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬಂಟ್ವಾಳದಲ್ಲಿ ಶ್ರೀರಾಮ ಹಾಗೂ ಅಲ್ಲಾಹನ‌ ನಡುವೆ ಸ್ಪರ್ಧೆ ‌ಎಂದಿದ್ದ ಸುನೀಲ್ ಕುಮಾರ್ ‌ಹೇಳಿಕೆಗೆ ರೈ ಕಿಡಿ ಕಾರಿದ್ದಾರೆ.

‘ ಬಿಜೆಪಿ ಮುಖಂಡರು ರಾಡಿಕಲ್ಸ್ ಅವರಿಗೆ ಕಾಮನ್ ಸೆನ್ಸ್ ಕಡಿಮೆ ಇದೆ. ಈಶ್ವರ್ ಅಲ್ಲಾ ತೇರೇ ನಾಮ್ ಅಂತ ಹೇಳಿದವರು ಗಾಂಧಿ. ಅಂತಹಾ ಗಾಂಧಿಯನ್ನೇ ಬಿಜೆಪಿಗರು ಒಪ್ಪಲ್ಲ. ನಮಗೆ ರಾಮ ಅಲ್ಲಾ ಏಸು ಬೇರೆ ಬೇರೆ ಅಲ್ಲ. ಎಲ್ಲಾರೂ ದೇವರು ‘

‘ ಸುನೀಲ್ ಕುಮಾರ್ ಗೆ ರಾಮನ ಬಗ್ಗೆ ಮಾತ್ರ ಗೊತ್ತಿದೆ. ನಮಗೆ ಎಲ್ಲಾ ಧರ್ಮದ ದೇವ ದೈವಗಳ ಬಗ್ಗೆ ತಿಳಿದಿದೆ . ತಾನು ಎಲ್ಲಾ ದೈವ ದೇವರನ್ನು ಆರಾಧಿಸ್ತೇನೆ. ದೇವರ ನಡುವೆ ಸ್ಪರ್ಧೆ ಎಂಬ ಹೇಳಿಕೆ ಎಷ್ಟರ ಮಟ್ಟಿಗೆ ಸರಿ..?  ಓಟಿಗಾಗಿ ಎಷ್ಟು ಕೀಳು ಮಟ್ಟದಲ್ಲಿ ಮಾತನಾಡ್ತಾರೆ. ಇದು ಸರಿಯಲ್ಲ ‘ ಎಂದು
ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ್ ರೈ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com