ಕರ್ನಾಟಕ ಹಿಂದೆಂದೂ ಇಂತಹ ಲಜ್ಜೆಗೆಟ್ಟ ಮುಖ್ಯಮಂತ್ರಿ ಕಂಡಿಲ್ಲ : ಶ್ರೀನಿವಾಸ ಪ್ರಸಾದ್

ಮೈಸೂರು : ಕರ್ನಾಟಕ ರಾಜ್ಯದಲ್ಲಿ ಕಲಬೆರಕೆ ಮುಖ್ಯಮಂತ್ರಿ ಇದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದು ನಮ್ಮ ದುರಂತ. ಅವರ ಬಾಯಿಂದ ಬರುವ ಮಾತುಗಳು ದುರ್ವಾಸನೆ ಬೀರುತ್ತಿವೆ ಎಂದು ಸುತ್ತೂರಿನಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಗೆ ಒಳ್ಳೆ ಆಲೋಚನೆಗಳು ಇರಬೇಕು.  ಮುಖ್ಯಮಂತ್ರಿ ಆದವರ ಹಾವಭಾವ ಗಂಭೀರವಾಗಿರಬೇಕು. ಇದುವರೆಗೂ ರಾಜ್ಯದಲ್ಲಿ ೨೦ ಮುಖ್ಯಮಂತ್ರಿ ಕಂಡಿದೆ. ಎಂದೂ ಸಿದ್ದರಾಮಯ್ಯ ಅವರಂಥ ಉಪಕಾರ ಸ್ಮರಣೆ ಇಲ್ಲದ ಸಿಎಂ ನೋಡಿಲ್ಲ ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com