ಅಮಿತ್ ಷಾ ರಾಜ್ಯಕ್ಕೆ ಬರೋದು CM ಗೆ ಭಯ ಮೂಡಿಸಿದೆ : ಶೋಭಾ ಕರಂದ್ಲಾಜೆ

ಮಂಗಳೂರಿನಲ್ಲಿ  ಚುನಾವಣಾ‌ ಉಸ್ತುವಾರಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಪ್ರಮುಖರ ಸಭೆ ನಡೆಯಿತು. ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ‘ ಅಮಿತ್ ಷಾ ರಾಜ್ಯಕ್ಕೆ ಬರೋದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭಯ ತಂದಿದೆ ಜನವರಿ 27ರಂದು ಇದ್ದ ಬಂದ್ ನ್ನು‌ 25ಕ್ಕೆ ಮಾಡಿಸಿದ್ದಾರೆ ‘ ಎಂದಿದ್ದಾರೆ.

‘ ಸಂಘಟನೆಗಳಿಗೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ. ರಾಜ್ಯದಲ್ಲಿ ನಿರಂತರ ಕೊಲೆಗಳಾಗುತ್ತಿದೆ, ಗೂಂಡಾ ರಾಜ್ಯವಾಗುತ್ತಿದೆ. ದರೋಡೆಕೋರರನ್ನು ಹೊಂದಿದ ೨ನೇ ರಾಜ್ಯ ಕರ್ನಾಟಕವಾಗಿದೆ. ದಕ್ಷ ಅಧಿಕಾರಿಗಳಿಗೆ ರಾಜ್ಯದಲ್ಲಿ ಉಳಿಗಾಲ ಇಲ್ಲದಂತಾಗಿದೆ. ಡಿಸಿ, ಎಸ್ಪಿ ಬಂದು ಮುಖಪರಿಚಯ ಆಗುವ ಮೊದಲೇ ವರ್ಗಾವಣೆ ಮಾಡಲಾಗ್ತಿದೆ. ಸರ್ಕಾರಕ್ಕೆ ತಗ್ಗಿ ಬಗ್ಗಿ ಇದ್ದವರಿಗೆ ರಕ್ಷಣೆ ಇದೆ ‘ ಎಂದು ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com