WATCH : Jonty Rhodes ರಂತೆ ರನೌಟ್ ಮಾಡಿ ಮಿಂಚಿದ ವಿನಯ್ ಕುಮಾರ್..!

ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಶ್ರೇಷ್ಟ ಫೀಲ್ಡರ್ ಗಳಲ್ಲಿ ಒಬ್ಬರೆಂದು ಹೆಸರಾದವರು. 1992 ರ ವಿಶ್ವಕಪ್ ನಲ್ಲಿ ಜಾಂಟಿ ರೋಡ್ಸ್ ಪಾಕಿಸ್ತಾನದ ಇಂಜಮಾಮ್ ಉಲ್ ಹಕ್ ಅವರನ್ನು ಅದ್ಭುತವಾಗಿ ಡೈವ್ ಮಾಡಿ ರನೌಟ್ ಮಾಡಿದ್ದರು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ನಾಯಕ ವಿನಯ್ ಕುಮಾರ್ ಜಾಂಟಿ ರೋಡ್ಸ್ ರೀತಿಯಲ್ಲಿಯೇ ರನೌಟ್ ಮಾಡಿ ಗಮನ ಸೆಳೆದಿದ್ದಾರೆ. ಮಿಡ್ ಆಫ್ ಕ್ಷೇತ್ರದಿಂದ ಓಡಿ ಬಂದು ಡೈವ್ ಮಾಡಿದ ವಿನಯ್, ಬೇಲ್ಸ್ ಎಗರಿಸಿ ಗುರುಕೀರತ್ ಸಿಂಗ್ ಅವರನ್ನು ಔಟ್ ಮಾಡಿದ್ದರು.

ಆ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಹಂಚಿಕೊಂಡಿರುವ ವಿನಯ್, ಜಾಂಟಿ ರೋಡ್ಸ್ ಅವರನ್ನು ಟ್ಯಾಗ್ ಮಾಡಿದ್ದಾರೆ. ‘ ಹಾಯ್ ಕೋಚ್,  1992 ರ ರನೌಟ್ ವಿಡಿಯೋ ಅನ್ನು ಹಲವಾರು ಬಾರಿ ನೋಡಿದ್ದ ನಾನು, ಅಂತಹುದೇ ಅವಕಾಶಕ್ಕಾಗಿ ಕಾಯುತ್ತಿದ್ದೆ. ಕೊನೆಗೂ ಆ ಅವಕಾಶ ಸಿಕ್ಕಿತು. ಹೇಗಿದೆ ಕೋಚ್..?’ ಎಂದು ಪ್ರಶ್ನಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com