Cricket : IPL – 11 ವೇಳಾಪಟ್ಟಿ ಬಿಡುಗಡೆ : ಬದಲಾಯ್ತು ಪಂದ್ಯಗಳ ಟೈಮಿಂಗ್..!

ಇಂಡಿಯನ್ ಪ್ರೀಮಿಯರ್ ಲೀಗ್ ನ 11 ಆವೃತ್ತಿಯ ವೇಳಾಪಟ್ಟಿಯನ್ನು ಐಪಿಲ್ ಆಡಳಿತ ಮಂಡಳಿ ಸೋಮವಾರ ಬಿಡುಗಡೆಗೊಳಿಸಿದೆ. ಟೂರ್ನಿಯಲ್ಲಿ ಪ್ರತಿಷ್ಠಿತ ಟ್ರೋಫಿಗಾಗಿ ಒಟ್ಟು 8 ತಂಡಗಳು ಸೆಣಸಾಡಲಿದ್ದು, ಏಪ್ರಿಲ್ 7 ರಿಂದ ಆರಂಭಗೊಂಡು ಮೇ 27 ರವರೆಗೆ ನಡೆಯಲಿದೆ. ಫೈನಲ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ.

Image result for ipl 11

ಪ್ರಸಾರದ ಹಕ್ಕನ್ನು ಪಡೆದುಕೊಂಡಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಕೋರಿಕೆಯ ಮೇರೆಗೆ ಪಂದ್ಯಗಳ ಸಮಯದಲ್ಲಿ ಸಹ ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ. 4 ಗಂಟೆಗೆ ಆರಂಭವಾಗುತ್ತಿದ್ದ ಪಂದ್ಯಗಳು 5.30ಕ್ಕೆ ಶುರುವಾಗಲಿದ್ದು, 8 ಗಂಟೆಗೆ ಪ್ರಾರಂಭಗೊಳ್ಳುತ್ತಿದ್ದ ಪಂದ್ಯಗಳು 7 ಕ್ಕೆ ಶುರುವಾಗಲಿವೆ. ಏಪ್ರಿಲ್ 6 ರಂದು ಮುಂಬೈನಲ್ಲಿ ನಡೆಯಲಿರುವ ಓಪನಿಂಗ್ ಸೆರೆಮನಿಯ ಮೂಲಕ ಐಪಿಲ್ 11ನೇ ಆವೃತ್ತಿಗೆ ಚಾಲನೆ ದೊರೆಯಲಿದೆ.

Image result for ipl 11

ಎರಡು ವರ್ಷಗಳ ನಿಷೇಧ ಎದುರಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಈ ಬಾರಿ ಭಾಗವಹಿಸಲಿವೆ.

Leave a Reply

Your email address will not be published.

Social Media Auto Publish Powered By : XYZScripts.com