‘ಬಂಟ್ವಾಳದಲ್ಲಿ ಅಲ್ಲಾಹು ಹಾಗೂ ರಾಮನ ಮಧ್ಯೆ ಚುನಾವಣೆ’ : BJP ಶಾಸಕ ಸುನಿಲ್ ಕುಮಾರ್

ಬಿಜೆಪಿ ಶಾಸಕ ಸುನೀಲ್ ಕುಮಾರ್ ದ.ಕ ಜಿಲ್ಲೆಯ ಕಲ್ಲಡ್ಕದಲ್ಲಿ ಸೋಮವಾರ ನಡೆದ ಪರಿವರ್ತನಾ ‌ನಡಿಗೆ ಸಮಾವೇಶದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ ಮುಂದಿನ‌ ಚುನಾವಣೆ ಬಂಟ್ವಾಳ ಕ್ಷೇತ್ರದಲ್ಲಿ ರಮನಾಥ್ ರೈ ಹಾಗೂ ರಾಜೇಶ್ ನಾಯ್ಕ್ ಉಳೆಪಾಡಿ ನಡುವಿನ ಸ್ಪರ್ಧೆ ಅಲ್ಲ. ಅಲ್ಲಾಹು ಹಾಗೂ ರಾಮನ ನಡುವಿನ ಚುನಾವಣೆ ಇದು . ಯಾರು ಬೇಕು ನಮಗೆ ತೀರ್ಮಾನ ಆಗಬೇಕು ‘ ಎಂದಿದ್ದಾರೆ.

‘ ಮತ್ತೆ ಮತ್ತೆ ಅಲ್ಲಾಹನನ್ನ ಗೆಲ್ಲಿಸ್ತೀವಾ ಅಥವಾ ರಾಮನನ್ನು ಪ್ರೀತಿಸೋ ವ್ಯಕ್ತಿಯನ್ನು ಗೆಲ್ಲಿಸ್ತೀವಾ  ಇದು ತೀರ್ಮಾನ ಆಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಚಿವ ರಮನಾಥ್ ರೈ ಅಲ್ಲಾಹನ ಕೃಪೆಯಿಂದ ನಾನು ಗೆದ್ದೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಉಲ್ಲೇಖಿಸಿ ಬಹಿರಂಗ ಸಮಾವೇಶದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಮಾತನಾಡಿದ್ದಾರೆ.

Leave a Reply

Your email address will not be published.