WATCH : Big Bash League : ಇಬ್ಬರು ಫೀಲ್ಡರ್ಸ್ ಸೇರಿ ಪಡೆದ ಅದ್ಭುತ ಕ್ಯಾಚ್…!

ಕ್ರಿಕೆಟ್ ಆಟದಲ್ಲಿ ಬ್ಯಾಟಿಂಗ್, ಬೌಲಿಂಗ್ ಅಷ್ಟೇ ಅಲ್ಲದೇ ಕ್ಷೇತ್ರರಕ್ಷಣೆಗೂ ಅದರದೇ ಆದ ಮಹತ್ವವಿದೆ. ಕ್ಯಾಚಸ್ ವಿನ್ ಮ್ಯಾಚಸ್ ಅನ್ನುವ ಮಾತೊಂದಿದೆ. ಪಂದ್ಯವೊಂದನ್ನು ಗೆಲ್ಲಬೇಕಾದರೆ ಅದ್ಭುತ ಕ್ಯಾಚ್ ಗಳು ನೆರವಾಗಬಲ್ಲವು.

ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ಟೂರ್ನಿಯಲ್ಲಿ ಮೆಲ್ಬರ್ನ್ ಸ್ಟಾರ್ಸ್ ಹಾಗೂ ಅಡಿಲೇಡ್ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಇಬ್ಬರು ಫೀಲ್ಡರ್ ಗಳು ಸೇರಿ ಆಶ್ಚರ್ಯಕರ ರೀತಿಯಲ್ಲಿ ಕ್ಯಾಚ್ ಪಡೆದಿದ್ದಾರೆ.

ರಾಶಿದ್ ಖಾನ್ ಎಸೆತದಲ್ಲಿ ದ್ವೇನ್ ಬ್ರಾವೊ ಚೆಂಡನ್ನು ಕವರ್ ಕ್ಷೇತ್ರದಲ್ಲಿ ಬಾರಿಸಿದ್ದಾರೆ. ಓಡೋಡಿ ಬಂದ ಬೆನ್ ಲಾಫ್ಲಿನ್ ಸಿಕ್ಸರ್ ಹೋಗುವ ಚೆಂಡನ್ನು ಮರಳಿ ಮೈದಾನದೊಳಗೆ ಎಸೆದಿದ್ದಾರೆ. ಆಗ ಜೇಕ್ ವೆದರಾಲ್ಡ್ ಚೆಂಡನ್ನು ತಮ್ಮ ವಶಕ್ಕೆ ಪಡೆದು ಕ್ಯಾಚನ್ನು ಪೂರ್ಣಗೊಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com