Australian Open : ಗಾಯಗೊಂಡು ಹೊರನಡೆದ ನಡಾಲ್, ಸೆಮಿಸ್ ತಲುಪಿದ ಸಿಲಿಕ್

ಬುಧವಾರ ಮೆಲ್ಬರ್ನ್ ನಗರದ ರಾಡ್ ಲೇವರ್ ಅರೆನಾದಲ್ಲಿ ನಡೆದ ಆಸ್ಟ್ರೇಲಿಯಾನ್ ಓಪನ್ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ರಫೆಲ್ ನಡಾಲ್ ಗಾಯಗೊಂಡು ಟೂರ್ನಿಯಿಂದ ಹೊರನಡೆದಿದ್ದಾರೆ. ರಫೆಲ್ ಎದುರಾಳಿ ಆಟಗಾರ ಕ್ರೋವೇಶಿಯಾದ ಮರಿನ್ ಸಿಲಿಕ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

Image result for nadal injury

ಪಂದ್ಯದ ಸ್ಕೋರ್ 3-6, 6-3, 6-7 (5/7), 6-2, 2-0 ಆಗಿದ್ದಾಗ ರಫೆಲ್ ನಡಾಲ್ ಬಲಗಾಲ್ಲಿ ನೋವು ಕಾಣಿಸಿಕೊಂಡಿತು. ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ರಫೇಲ್ ಪಂದ್ಯವನ್ನು ಕೈ ಚೆಲ್ಲಬೇಕಾಗಿ ನಿರಾಸೆ ಅನುಭವಿಸಿದರು.

ಬುಧವಾರ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರಿಗೊರ್ ಡಿಮಿಟ್ರೋವ್ ವಿರುದ್ಧ 6-4, 3-6, 6-3, 6-4 ಪಾಯಿಂಟ್ ಗಳಿಂದ ಜಯ ಸಾಧಿಸಿದ ಬ್ರಿಟನ್ ದೇಶದ ಕೈಲ್ ಎಡ್ಮಂಡ್ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದಾರೆ.

One thought on “Australian Open : ಗಾಯಗೊಂಡು ಹೊರನಡೆದ ನಡಾಲ್, ಸೆಮಿಸ್ ತಲುಪಿದ ಸಿಲಿಕ್

Leave a Reply

Your email address will not be published.

Social Media Auto Publish Powered By : XYZScripts.com