‘ಕೊಹ್ಲಿ ಅತ್ಯುತ್ತಮ ಬ್ಯಾಟ್ಸಮನ್, ಆದರೆ ಶ್ರೇಷ್ಟ ಅಲ್ಲ..’ : Michael Holding ಹೀಗೆ ಹೇಳಿದ್ದೇಕೆ..?

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರೆಂದು ಕರೆಯಲ್ಪಡುತ್ತಾರೆ. ರನ್ ಮಷಿನ್ ಎಂದೇ ಹೆಸರಾಗಿರುವ ವಿರಾಟ್ ಕೊಹ್ಲಿ 2017 ನೇ ಸಾಲಿನ ‘ಐಸಿಸಿ ವರ್ಷದ ಕ್ರಿಕೆಟರ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ಮಾಜಿ ವೇಗದ ಬೌಲರ್ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರರಾಗಿರುವ ಮೈಕಲ್ ಹೋಲ್ಡಿಂಗ್ ‘ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸಮನ್, ಆದರೆ ಶ್ರೇಷ್ಟ ಅಲ್ಲ ‘ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಗೆ ಮೈಕಲ್ ಹೋಲ್ಡಿಂಗ್ ತಮ್ಮದೇ ಆದ ವಿವರಣೆಯನ್ನೂ ಸಹ ನೀಡಿದ್ದಾರೆ.

‘ ವಿರಾಟ್ ಕೊಹ್ಲಿ ಒಬ್ಬ ಅದ್ಭುತ ಬ್ಯಾಟ್ಸಮನ್, ವಿಶ್ವದ ಟಾಪ್ 3 ಕ್ರಿಕೆಟಿಗರಲ್ಲಿ ಒಬ್ಬರೆಂದು ನಾನು ಅವರನ್ನು ಪರಿಗಣಿಸುತ್ತೇನೆ. ವಿರಾಟ್ ತುಂಬಾ ತುಂಬಾ ಉತ್ತಮ ಬ್ಯಾಟ್ಸಮನ್ ಆಗಿದ್ದಾರೆ. ಆದರೆ ಇಂಗ್ಲೆಂಡ್ ನೆಲದಲ್ಲಿ ರನ್ ಸ್ಕೋರ್ ಮಾಡಿದಾಗ ಮಾತ್ರ ನಾನು ಅವರನ್ನು ಶ್ರೇಷ್ಟ ಎಂದು ಕರೆಯುತ್ತೇನೆ. ಜಗತ್ತಿನ ಎಲ್ಲ ಕಡೆಯೂ ರನ್ ಗಳಿಸುವ ಬ್ಯಾಟ್ಸಮನ್ ಗಳೆಂದರೆ ನನಗೆ ಇಷ್ಟ ‘ ಎಂದು ಹೇಳಿದ್ದಾರೆ.

2014 ರ ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ, 10 ಇನ್ನಿಂಗ್ಸ್ ಗಳಲ್ಲಿ ಒಟ್ಟು 134 ರನ್ ಗಳಿಸಿದ್ದರು.

Leave a Reply

Your email address will not be published.