ಬಯಲಾಯ್ತು BJP MLA ಕರ್ಮಕಾಂಡ : ಮನೆ ಕಟ್ಟಿಸಿಕೊಳ್ಳಲು ಸರ್ಕಾರಿ ಸಿಮೆಂಟ್‌ ಬಳಕೆ…!

ವಿಜಯಪುರ : ಸಾರ್ವಜನಿಕರು ಆರಿಸಿ ಕಳುಹಿಸಿರುವ ಜನಪ್ರತಿನಿಧಿಗಳೇ ಜನರ ಹಣ ಲೂಟಿ ಹೊಡೆಯುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ವಿಜಯಪುರದ ಸಿಂಧಗಿ ಕ್ಷೇತ್ರದ ಶಾಸಕ ರಮೇಶ್‌ ಭೂಸನೂರ ಮನೆ ಕಟ್ಟುತ್ತಿದ್ದು, ಇದಕ್ಕಾಗಿ ಸರ್ಕಾರಿ ಕಾಮಗಾರಿಗಳಿಗೆ ಬಳಸುತ್ತಿದ್ದ ಸಿಮೆಂಟನ್ನು ಬಳಸುತ್ತಿದ್ದು, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಿಂಧಗಿಯ ಆರ್‌.ಡಿ ಕಾಲೇಜಿನ ಎದುರು ರಮೇಶ್‌ ಮನೆ ಕಟ್ಟಿಸುತ್ತಿದ್ದು, ಇದಕ್ಕೆ ಸರ್ಕಾರಿ ಕಾಮಗಾರಿಗಳಿಗೆ ಬಳಸುವ ಸಿಮೆಂಟ್‌ ಬಳಸಿ, ಜನರಿಗೆ ಮೋಸ ಮಾಡುತ್ತಿದ್ದಾರೆ. ಈ ಸಿಮೆಂಟ್‌ ಚೀಲಗಳ ಮೇಲೆ ನಾಟ್‌ ಫಾರ್‌ ಸೇಲ್‌ ಎಂಬ ಬರಹವಿದ್ದರೂ ಅದನ್ನು ಬಿಜೆಪಿ ಶಾಸಕರು ಬಳಸುತ್ತಿರುವುದು ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com