Syed Mushtaq Ali Trophy : ಪಂಜಾಬ್‍ಗೆ ರೋಚಕ ಜಯ, ಕರ್ನಾಟಕಕ್ಕೆ ನಿರಾಸೆ

ಭಾನುವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ಸುತ್ತಿನ ಎಲಿಮಿನೇಟರ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಪಂಜಾಬ್ ರೋಚಕ ಜಯ ಸಾಧಿಸಿದೆ. ಈ ಮೂಲಕ ಕರ್ನಾಟಕ ಟೂರ್ನಿಯಿಂದ ಹೊರಬಿದ್ದಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತು. ಕರ್ನಾಟಕದ ಪರವಾಗಿ ಅನಿರುದ್ಧ ಜೋಶಿ 40, ಸಿ ಎಮ್ ಗೌತಮ್ 36 ರನ್ ಬಾರಿಸಿದರು.

ಗುರಿಯನ್ನು ಬೆನ್ನತ್ತಿದ ಪಂಜಾಬ್ 20 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 158 ರನ್ ಸೇರಿಸಿತು. ಮನದೀಪ್ ಸಿಂಗ್ 45, ಹರಭಜನ್ ಸಿಂಗ್ 33 ಹಾಗೂ ಯುವರಾಜ್ ಸಿಂಗ್ 29 ರನ್ ಗಳಿಸಿದರು. ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಯಿತು.

ಸೂಪರ್ ಓವರಿನಲ್ಲಿ ಪಂಜಾಬ್ ಪರವಾಗಿ ಬ್ಯಾಟ್ ಮಾಡಲಿಳಿದ ಯುವರಾಜ್ ಹಾಗೂ ಮನದೀಪ್ 15 ರನ್ ಸೇರಿಸಿದರು. ಆದರೆ ಉತ್ತರವಾಗಿ ಕರ್ನಾಟಕ ಕೇವಲ 11 ರನ್ ಗಳಿಸಿ ಸೋಲೊಪ್ಪಿಕೊಂಡಿತು.

Leave a Reply

Your email address will not be published.

Social Media Auto Publish Powered By : XYZScripts.com