ಬಾಲಿವುಡ್‌ನಲ್ಲಿ ಪ್ರಯಾಣ ಬೆಳೆಸಿದ ರಾಜು ಕನ್ನಡ ಮೀಡಿಯಂ : ಹಿಂದಿಯಲ್ಲಿ Remake

ಬೆಂಗಳೂರು : ರಾಜು ಕನ್ನಡ ಮೀಡಿಯಂ ಸಿನಿಮಾ ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಂಭ್ರಮದಲ್ಲಿರುವ ಚಿತ್ರತಂಡಕ್ಕೆ ಮತ್ತೊಂದು ಸಂತೋಷ ಎದುರಾಗಿದ್ದು, ಈ ಸಿನಿಮಾ ಬಾಲಿವುಡ್‌ನಲ್ಲಿ ರಿಮೇಕ್‌ ಮೂಲಕ ಎಂಟ್ರಿ ಕೊಡಲು ಸಿದ್ದತೆ ನಡೆಯುತ್ತಿದೆ

ಹೌದು ರಾಜು ಕನ್ನಡ ಮೀಡಿಯಂ ಸಿನಿಮಾ ಬಾಲಿವುಡ್‌ನಲ್ಲಿ ರಿಮೇಕ್‌ ಆಗುತ್ತಿದೆ.ಈ ಸಿನಿಮಾಗೆ ಮಿಸ್ಟರ್‌ ಪರ್ಫೆಕ್ಟ್ ಎಂದು ಕರೆಸಿಕೊಳ್ಳುವ ಅಮೀರ್‌ ಖಾನ್‌ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹಿಂದಿಯಲ್ಲಿ ರಿಮೇಕ್‌ ಮಾಡುವುದಾದರೆ ಸುದೀಪ್‌ ಪಾತ್ರವನ್ನು ಅಮೀರ್‌ ಖಾನ್‌ ಮಾಡುವ ಸಾಧ್ಯತೆ ಇದೆ. ಅಲ್ಲದೆ ಈ ಸಿನಿಮಾವನ್ನು ಅಮೀರ್‌ ಖಾನ್‌ ತಮ್ಮದೇ ಪ್ರೊಡಕ್ಷನ್‌ನಲ್ಲಿ ನಿರ್ಮಾಣ ಮಾಡಲು ಆಸಕ್ತಿ ತೊರಿದ್ದು, ರಾಜ್‌ ಕುಮಾರ್‌ ರಾವ್‌ ಗುರುನಂದನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಈಗಾಗಲೆ ಅಮೀರ್ ಚಿತ್ರಸಂಸ್ಥೆ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದ್ದು. ಅಮೀರ್ ಆಪ್ತ ಸಲಹೆಗಾರ ವರುಣ್ ಒಪ್ಪಿದರೆ ರಾಜು ಬಾಲಿವುಡ್‌ಗೆ ಪ್ರಯಾಣಿಸುವುದು ಫಿಕ್ಸ್ ಆದಂತಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com