22.5 ಲಕ್ಷ ಜನರನ್ನು ಬೀದಿಗೆ ತಳ್ಳುತ್ತಿರುವ ಸರ್ಕಾರ:  ಇದೇನಾ ಗುಜರಾತ್ ಮಾಡೆಲ್

ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಮಾಡಿದ ನಂತರ ವಲಸೆ ಕಾರ್ಮಿಕರು ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿಕೊಂಡರು. ಕಾರ್ಮಿಕರ ಈ ಬಿಕ್ಕಟ್ಟು ಗುಜರಾತ್‌ನಲ್ಲಿ ಹಿಂದೆಂದಿಗಿಂತಲೂ ಕಾರ್ಮಿಕ ಕಾನೂನುಗಳ ಉಲ್ಲಂಘನೆಗೆ ಕಾರಣವಾಗಿದೆ. ತಮ್ಮೂರುಗಳಿಗೆ ಮರಳಲು ಕಾರ್ಮಿಕರಿಂದ ಪ್ರಯಾಣ ದರವನ್ನು ಕಾರ್ಮಿಕರಿಂದ ಪಡೆಯದಿರುವ ವಿಷಯದಲ್ಲಿ ರಾಜ್ಯ ಸರ್ಕಾರ ಇಬ್ಬಂದಿ ಧೋರಣೆಯನ್ನು ಹೊಂದಿದೆ.

ಗುಜರಾತ್ ಸರ್ಕಾರದ ನಿಬಂಧನೆಯಡಿಯಲ್ಲಿ ನೊಂದಾಯಿಸಿಕೊಂಡಿರುವ 7,512 ಕಾರ್ಮಿಕರಿಗೆ ಮಾತ್ರ ಉಚಿತ ಪ್ರಯಾಣದ ಅನುಕೂಲವನ್ನು ನೀಡಲಾಗಿದ್ದು, ನೊಂದಾಯಿಸಿಕೊಳ್ಳದ 22.5 ಲಕ್ಷ ಕಾರ್ಮಿಕರನ್ನು ಸರ್ಕಾರದ ನೆರವಿನಿಂದ ದೂರವಿಟ್ಟಿದೆ.

ಕೊರೊನಾ ಚಿಕಿತ್ಸೆ ಮತ್ತು ಸಾಮೂಹಿಕ ವಲಸೆಗೆ ಸಂಬಂಧಿಸಿದ ಬಿಕ್ಕಟ್ಟಿನ ಗ್ಗೆ ಮಾಧ್ಯಮಗಳ ವರದಿಗಳನ್ನಾಧರಿಸಿ ನ್ಯಾಯಾಲಯ ಮತ್ತುಸಿವಿಲ್ ಸೊಸೈಟಿ ಸದಸ್ಯರು ಪ್ರಾರಂಭಿಸಿದ ಸುಯೊ ಮೋಟು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸೇರಿದಂತೆ ಹಲವಾರು ದಾವೆಗಳಿಗೆ ಪ್ರತಿಕ್ರಿಯಿಸಿದರು ರಾಜ್ಯ ಸರ್ಕಾರ ಶುಕ್ರವಾರ ಹೈಕೋರ್ಟ್‌ನಲ್ಲಿ ಸಲ್ಲಿಸಿದ ವರದಿಯಲ್ಲಿ ಈ ವಿಷಯ ಬಗ್ಗೆ  ತಿಳಿಸಿದೆ.

ಕಾರ್ಮಿಕರು ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಸೂರತ್, ಅಹಮದಾಬಾದ್ ಮತ್ತು ಇತರ ನಗರಗಳಲ್ಲಿ ಹಲವಾರು ಹಿಂಸಾತ್ಮಕ ಘಟನೆಗಳು ನಡೆದ ನಂತರ ವಲಸೆ ಕಾರ್ಮಿಕರನ್ನು ತಮ್ಮ ಮಾತೃ ರಾಜ್ಯಗಳಿಗೆ ಕಳುಹಿಸಲು ನಿರ್ಧರಿಸಿ, ಕಾರ್ಮಿಕರನ್ನು ಗುರುತಿಸಲು ಆರಂಭಿಸಿದ ಒಂದೂವರೆಗೆ ತಿಂಗಳ ಬಳಿಕ ಸರ್ಕಾರವು ಈ ಮಾಹಿತಿಯನ್ನು ಕಂಡುಕೊಂಡಿದೆ.

ಉಚಿತ ಪ್ರಯಾಣ ವ್ಯವಸ್ಥೆಯು “ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979 ರ ಕಾಯ್ದೆಯಡಿ ನೋಂದಾಯಿತ ವಲಸೆ ಕಾರ್ಮಿಕರಿಗೆ ಮಾತ್ರ ಅನ್ವಯವಾಗುತ್ತದೆ. ಈ ಕಾಯ್ದೆಯಡಿ 7,512 ಕಾರ್ಮಿಕರು ನೊಂದಾಯಿಸಿಕೊಂಡಿದ್ದಾರೆ.

ಅವರಲ್ಲದೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ರಾಜ್ಯದಾದ್ಯಂತ ಸುಮಾರು 22.5 ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಅವರೆಲ್ಲರೂ ನೋಂದಾಯಿಸಿಕೊಂಡಿಲ್ಲ. ಅವರಿಗೆ ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979 ಅನ್ವಯಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಸಂವಿಧಾನದ 14 ಮತ್ತು 15ನೇ ಪರಿಚ್ಛೇದದ ಪ್ರಕಾರ ಅವರೆಲ್ಲರೂ ಪ್ರಯಾಣ ಭತ್ಯೆ ಮತ್ತು ಸ್ಥಳಾಂತರ ಭತ್ಯೆ ಪಡೆಯಲು ಅವಕಾಶವಿದೆ.

“ಕಾರ್ಮಿಕ ಕಾನೂನುಗಳ ಸಂಪೂರ್ಣ ಉಲ್ಲಂಘನೆಯ ಕುರಿತು ಇಂತಹ ವರದಿಯು ಸಾರ್ವಜನಿಕವಾಗಿ ಹೊರಬಂದಿರುವುದು ಇದೇ ಮೊದಲು. ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಕಾರ್ಮಿಕ ಇಲಾಖೆ ಎಲ್ಲೂ ಕಾರ್ಯನಿರ್ವಹಿಸುತ್ತಿಲ್ಲ, ಅದು ಸಂಪೂರ್ಣ ವಿಫಲವಾಗಿದೆ ಎಂದರ್ಥ.   

“ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಭಾರಿ ಕಾರ್ಮಿಕ ಹಗರಣ ನಡೆಯುತ್ತಿದೆ. ಕಾರ್ಮಿಕರ ಮೇಲಿನ ಶೋಷಣೆಯೂ ಹೆಚ್ಚಿದೆ. ನಮಗೆಲ್ಲರಿಗೂ ಇದರ ಬಗ್ಗೆ ತಿಳಿದಿದೆ. ಆದರೆ ಸರ್ಕಾರ ಎಂದಿಗೂ ಅದರ ಬಗ್ಗೆ ಗಮನಹರಿಸಿಲ್ಲ. ಕಾರ್ಮಿಕರನ್ನು ತಮ್ಮ ಯಜಮಾನರಿಂದ ಶೋಷಿಸಲು ಬಿಡಬಾರದು” ಎಂದು ಕಾರ್ಮಿಕ ಕಾನೂನುಗಳ ಪ್ರಕರಣಗಳಲ್ಲಿ ವಾದ ಮಂಡಿಸುವ ವಕೀಲ ಅಮೃಶ್ ಪಟೇಲ್ ಹೇಳಿದ್ದಾರೆ.

ದೇಶವನ್ನು ಮುನ್ನಡೆಸಲು ಅಗತ್ಯವಿರುವ ಮಾದರಿಯನ್ನು ಕಟ್ಟಿಕೊಟ್ಟಿದ್ದೇವೆ , ನಮ್ಮದು ಗುಜರಾತ್‌ ಮಾದರಿ ಎಂದು ಗುಜರಾತ್‌ ಮಾಜಿ ಮುಖ್ಯಮಂತ್ರಿ ಹಾಗೂ ದೇಶದ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಆರು ವರ್ಷಗಳಿಂದ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಅದೇ ಮಾದರಿಯ ರಾಜ್ಯ ಗುಜರಾತ್‌ನಲ್ಲಿ ಸ್ಲಂ ಜನರಿಗೆ ವಸತಿ ನೀಡಲಾಗದೆ ಸ್ಲಂ ಸುತ್ತ ಗೋಡೆ ಕಟ್ಟಲಾಗುತ್ತಿದೆ. ದಲಿತರು-ಬಡವರ ಮೇಲೆ ಶೋಷಣೆ-ದಬ್ಬಾಳಿಕೆಗಳು, ಕೋಮುಗಲಬೆಗಳು ನಡೆಯುತ್ತಿವೆ. ಕಾರ್ಮಿಕರ ಶೋಷಣೆಯೂ ಹೇಳತೀರದಾಗಿದೆ. ಈಗ ಕಾರ್ಮಿಕರು ತಮ್ಮೂರುಗಳಿಗೆ ಮರಳಲು ವ್ಯವಸ್ಥೆ ಮಾಡಿಕೊಡಲಾಗದಂತಹ ನೀಚ ತನವನ್ನು ಸರ್ಕಾರ ಪ್ರದರ್ಶಿಸುತ್ತಿದೆ. ಈ ಕೊಳಕು ರಾಜಕಾರಣವೇ ಗುಜರಾತ್ ಮಾಡೆಲ್ ಆದಂತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights