ಕನ್ನಡಿಗ ನವೀನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾವನಾ ಮೆನನ್‌

ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿದ್ದ ನಟಿ ಭಾವನಾ ಅವರ ಮದುವೆ ಕನ್ನಡಿಗ ನವೀನ್‌ ಜೊತೆ ಇಂದು ಬೆಳಗ್ಗೆ ಕೇರಳದಲ್ಲಿ ನೆರವೇರಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಕೇರಳದ ತ್ರಿಶೂರ್‌ನಲ್ಲಿನ ತಿರುವಂಬಾಡಿ ದೇವಾಲಯದಲ್ಲಿ ಭಾವನಾ ಹಸೆಮಣೆ ಏರಿದ್ದಾರೆ.

2017ರ ಮಾರ್ಚ್‌ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಇಂದು ಮದುವೆ ನೆರವೇರಿದೆ. ಭಾವನಾ ಕನ್ನಡದ ಜಾಕಿ, ರೋಮಿಯೋ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಗಣೇಶ್‌ ಹಾಗೂ ಭಾವನಾ ಅಭಿನಯದ ರೋಮಿಯೋ ಸಿನಿಮಾಗೆ ನವೀನ್‌ ನಿರ್ಮಾಪಕರಾಗಿದ್ದರು.

ಇಂದು ಸಂಜೆಯೇ ತ್ರಿಶೂರ್‌ನ ಲುಲು ಕನ್ವೆಂಷನ್‌ ಸೆಂಟರ್‌ಲ್ಲಿ ಆರತಕ್ಷತೆ ನಡೆಯಲಿದ್ದು, ಚಿತ್ರರಂಗದ ಗಣ್ಯರು ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.

ಭಾವನಾ ಹಾಗೂ ನವೀನ್ ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದು, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com