ಈ ಅನಂತ್‌ ಕುಮಾರ್ ಹೆಗಡೆನ ಮಂತ್ರಿ ಮಾಡಿದ್ದಾರಲ್ಲ ಅವ್ರು ಕಾಡುಕತ್ತೆ……?!

ಹುಬ್ಬಳ್ಳಿ : ಸಂವಿಧಾನವನ್ನು ಬದಲಿಸಲು ಅನಂತ್‌ ಕುಮಾರ್‌ ಹೆಗಡೆಯ ಅಪ್ಪ ಬಂದರೂ ಸಾಧ್ಯವಿಲ್ಲ. ಒಂದು ವೇಳೆ ಬದಲಿಸುವುದಾದರೆ ಅಂಬೇಡ್ಕರ್‌ ಮತ್ತೆ ಹುಟ್ಟಿ ಬರಬೇಕು. ಅನಂತ್‌ ಕುಮಾರ್‌ ಹೆಗಡೆ ಒಬ್ಬ ನಾಲಾಯಕ್‌, ಮೊದಲು ಆತನ ರಾಜೀನಾಮೆ ಪಡೆಯಲಿ ಎಂದು ಮನಸೂರು ರೇವಣ್ಣಸಿದ್ದೇಶ್ವರ ಮಠದ ಬಸವರಾಜ ದೇವರು ಸ್ವಾಮೀಜಿ ಹೇಳಿದ್ದಾರೆ.

ಅನಂತ್‌ ಕುಮಾರ್‌ ಒಬ್ಬ ಅವಿವೇಕಿ ಎಂದಿರುವ ಅವರು, ಆತನ ಬಗ್ಗೆ ಮಾತನಾಡಿದರೆ ನಾಲಿಗೆ ಹೊಲಸಾಗುತ್ತದೆ. ಕೌಶಲ್ಯಾಭಿವೃದ್ಧಿ ಅಲ್ಲ ಆತ ಕಾಡೆಮ್ಮೆ ಇದ್ದಂತೆ. ಕಾಡುಕತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.  ದಲಿತರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಆವನನ್ನು ಮಂತ್ರಿ ಮಾಡಿದ್ದಾರಲ್ಲ ಅವರು ಕಾಡುಕತ್ತೆ ಎಂದು ಜರಿದಿದ್ದಾರೆ.

ಇದೇ ವೇಳೆ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸಂಸತ್‌ ಮೇಲೆ ನಿರ್ಮಿಸಬೇಕು ಎಂದು ಆಗ್ರಹಿಸಿರುವ ಅವರು, ಹುಬ್ಬಳ್ಳಿ ನಿಲ್ದಾಣಕ್ಕೂ ರಾಯಣ್ಣನ ಹೆಸರಿಡಬೇಕು. ರಾಣಿ ಚೆನ್ನಮ್ಮಳ ಕೆಲ ವಸ್ತುಗಳು ವಿದೇಶದಲ್ಲಿದ್ದು ಅದನ್ನು ವಾಪಸ್‌ ತರಬೇಕು. ರಾಯಣ್ಣ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಮುದುಕರಿಗೆ ನೀಡಿದೆ. ಅದನ್ನು ಯುವಕರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com