ನಮಗೂ ರಾಜಕೀಯ ಗೊತ್ತು, ರಾಜ್ಯಕ್ಕೆ ರಾಹುಲ್‌ ಬಂದಾಗ ನಾವೂ ಬಂದ್‌ ಮಾಡ್ತೀವಿ : ಶೆಟ್ಟರ್‌

ಹುಬ್ಬಳ್ಳಿ : ರಾಜ್ಯದಲ್ಲಿ ಬಿಜೆಪಿ ಯಾತ್ರೆ ಹಮ್ಮಿಕೊಳ್ಳುವ ದಿನವೇ ರಾಜ್ಯ ಬಂದ್‌ ಗೆ ಕಾಂಗ್ರೆಸ್‌ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಇದಕ್ಕೆ ಜಗದೀಶ್‌ ಶೆಟ್ಟರ್‌ ತಿರುಗೇಟು ನೀಡಿದ್ದಾರೆ. ರಾಹುಲ್‌ ಗಾಂಧಿ ಕಲವೇ ದಿನಗಳಲ್ಲಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ರಾಹುಲ್‌ ಗಾಂಧಿ ಕರ್ನಾಟಕಕ್ಕೆಬಂದಾಗ ನಾವು ಬಂದ್‌ ಮಾಡುತ್ತೇವೆ ಎಂದಿದ್ದಾರೆ.

ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್‌, 25ರಂದು ಬಂದ್‌ ಹಿಂದಿರುವ ಮಾಸ್ಟರ್‌ ಮೈಂಡ್‌ ಸಿದ್ದರಾಮಯ್ಯ. ನಮಗೂ ರಾಜಕೀಯ ಗೊತ್ತು. ನಿಮ್ಮ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯಕ್ಕೆ ಬಂದಾಗ ನಾವು ಸಹ ಬಂದ್ ಕರೆ ನೀಡುತ್ತೇವೆ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

25ರ ಬಂದ್‌ ಸರ್ಕಾರಿ ಪ್ರಾಯೋಜಿತ ಬಂದ್ ಎಂದು ಕಾಂಗ್ರೆಸ್‌ ವಿರುದ್ದ ಕಿಡಿಕಾರಿರುವ ಅವರು, ಸಿದ್ದರಾಮಯ್ಯನ ಕುತಂತ್ರದಿಂದ ಬಂದ್‌ಗೆ ಕರೆ ನೀಡಲಾಗಿದೆ. ರಾಹುಲ್‌ ಗಾಂಧಿ ಯಾಕೆ ಮೌನವಾಗಿದ್ದರೆ ಎಂಬುದು ತಿಳಿಯುತ್ತಿಲ್ಲ. ಅವರು ತಮ್ಮ ಪಕ್ಷದ ನಿಲುವೇನು ಎಂದು ಮೊದಲು ಸ್ಪಷ್ಟಪಡಿಸಲಿ. ಮಹದಾಯಿ ವಿಚಾರದಲ್ಲಿ ಸಿದ್ದರಾಮಯ್ಯ ನಾಟಕ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com