ಪರಸ್ಪರ ಮುಖಾಮುಖಿಯಾದಾಗ ರೇವಣ್ಣ ಕುತ್ತಿಗೆಗೆ ಕೈ ಹಾಕಿದ ಡಿಕೆಶಿ……?!!

ಹಾಸನ : ಮದುವೆ ಸಮಾರಂಭವೊಂದರಲ್ಲಿ ಇಂದನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಎಚ್‌.ಡಿ ರೇವಣ್ಣ ಪರಸ್ಪರ ಮುಖಾಮುಖಿಯಾಗಿದ್ದಾರೆ. ಈ ವೇಳೆ ಇಬ್ಬರು ನಾಯಕರು ಕೈಕುಲುಕಿದ್ದು, ಕುಶಲೋಪರಿ ವಿಚಾರಿಸಿದ್ದಾರೆ.

ಅಲ್ಲದೆ ರೇವಣ್ಣ ಅವರ ಕುತ್ತಿಗೆಯಲ್ಲಿದ್ದ ಏಲಕ್ಕಿ ಹಾರದ ಮಾಲೆಯನ್ನು ಡಿಕೆಶಿ ಮುಟ್ಟಿ ನೋಡಿ ನಕ್ಕಿದ್ದಾರೆ. ಸಾಮಾನ್ಯವಾಗಿ ರೇವಣ್ಣ ಏಲಕ್ಕಿ ಹಾರವನ್ನು ಹಾಕಿಕೊಂಡು ತಿರುಗಾಡುವುದು ಸಾಮಾನ್ಯ. ಅಲ್ಲದೆ ಇದು ಶತ್ರು ನಾಶಕ್ಕೆ ಸಹಕಾರಿ ಎಂಬ ಹಿನ್ನೆಲೆ ಸಹ ಇರುವ ಕಾರಣ ಅದನ್ನು ನೋಡಿ ನಕ್ಕಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್‌, ಚುನಾವಣೆ ಸೋಲು-ಗೆಲುವಿನ ಬಗ್ಗೆ ಸಿಎಂಗೆ ಗುಪ್ತಚರ ಇಲಾಖೆಗಳು ಶಾಕಿಂಗ್‌ ವರದಿ ಸಲ್ಲಿಸಿವೆ ಎಂಬ ವಿಚಾರ ಸುಳ್ಳು. ಅರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ಜೊತೆಗೆ ಜೆಡಿಎಸ್‌ ಬಗ್ಗೆ ಡಿಕೆಶಿಗೆ ಸಾಫ್ಟ್‌ ಕಾರ್ನರ್‌ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನ ಎಲ್ಲರೊಂದಿಗೂ ಸಾಫ್ಟಾಗಿದ್ದೇನೆ. ರಾಮನಗರ ಸೇರಿದಂತೆ ಎಲ್ಲೂ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮನುಷ್ಯತ್ವದ ಹಿನ್ನೆಲೆಯಲ್ಲಿ ಕೆಲವರಿಗೆ ಗೌರವ ನೀಡುತ್ತೇನೆ. ಗೆಲ್ಲಲು ಏನು ಬೇಕೋ ಅದನ್ನು ನಾನು ಮಾಡುತ್ತಿದ್ದೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com