2008ರ ಗುಜರಾತ್ ಬಾಂಬ್ ಸ್ಫೋಟ ಪ್ರಕರಣ : Indian Mujahideen ಉಗ್ರನ ಬಂಧನ

2008ರಲ್ಲಿ ಗುಜರಾತ್ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ದೆಹಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಅಬ್ದುಲ್ ಸುಭಾನ್ ಕುರೇಶಿ ಅಲಿಯಾಸ್ ತೌಕೀರ್ ಎಂಬಾತನನ್ನು ಸೋಮವಾರ ಬಂಧಿಸಿದ್ದಾರೆ. ಗುಜರಾತ್ ಬಾಂಬ್ ಸ್ಫೋಟ ಪ್ರಕರಣದಲ್ಲಿ, ಬಾಂಬ್ ತಯಾರಿಸಿದ ಆರೋಪ ಈತನ ಮೇಲಿದೆ.

Image result for gujarat bomb 2008

ಮೋಸ್ಟ್ ವಾಂಟೆಡ್ ಉಗ್ರರ ಲಿಸ್ಟ್ ನಲ್ಲಿದ್ದ ಅಬ್ದುಲ್, Student Islamic Movement of India (SIMI) ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಸಂಘಟನೆಗಳ ಸದಸ್ಯನಾಗಿದ್ದ. ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಅಬ್ದುಲ್, ಭಾರತದ ಬಿನ್ ಲಾಡೆನ್ ಎಂದೇ ಕುಖ್ಯಾತಿಯಾಗಿದ್ದ.

Related image

ಗುಜರಾತ್ ರಾಜಧಾನಿ ಅಹಮದಾಬಾದ್ ನಲ್ಲಿ 2008ರ ಜುಲೈ 26ರಂದು ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 56 ಜನ ಮೃತಪಟ್ಟು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 2006 ಜುಲೈನಲ್ಲಿ ಮುಂಬೈ ಸರಣಿ ಸ್ಫೋಟದ ಹಿಂದೆಯೂ ಈತನ ಕೈವಾಡವಿದೆ ಎಂದು ಶಂಕಿಸಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com