Australian Open : ಕ್ವಾರ್ಟರ್ ಫೈನಲ್ ಹಂತಕ್ಕೆ ಫೆಡರರ್, ನಡಾಲ್

ಸ್ವಿಟ್ಜರ್ಲೆಂಡ್ ದೇಶದ ರೋಜರ್ ಫೆಡರರ್ ಪ್ರಸಕ್ತ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ. 36 ವರ್ಷದ ರೋಜರ್ ಫೆಡರರ್ 14ನೇ ಬಾರಿ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ ಗೆ ಕಾಲಿಟ್ಟಿದ್ದಾರೆ.

ಆಸ್ಟ್ರೇಲಿಯಾದ ರಾಡ್ ಲೇವರ್ ಅರೆನಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ, ಹಂಗರಿಯ ಮಾರ್ಟನ್ ಫುಕ್ಸೋವಿಕ್ಸ್ ವಿರುದ್ಧ 6-4 7-6(3) 6-2 ಪಾಯಿಂಟ್ ಗಳಿಂದ ಫೆಡರರ್ ಜಯ ಗಳಿಸಿದ್ದಾರೆ. ಕಳೆದ ಬಾರಿಯ ಚಾಂಪಿಯನ್ ಆಗಿರುವ ಫೆಡರರ್, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೆಕ್ ಆಟಗಾರ ಟಾಮಸ್ ಬೆರ್ಡಿಕ್ ಅವರನ್ನು ಎದುರಿಸಲಿದ್ದಾರೆ.

ಸ್ಪೇನ್ ದೇಶದ ರಫೆಲ್ ನಡಾಲ್ ಅರ್ಜೆಂಟೀನಾದ ಸ್ಕ್ವಾರ್ಟ್ಜ್ ಮನ್ ಅವರನ್ನು ಮಣಿಸಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com