ಲೋಯಾ ಪ್ರಕರಣದ ಎಲ್ಲಾ PIL ಗಳೂ ಸುಪ್ರೀಂ ಅಂಗಳಕ್ಕೆ : ಫೆ. 2ರಂದು ವಿಚಾರಣೆ

ದೆಹಲಿ : ಅಮಿತ್ ಶಾ ಆರೋಪಿಯಾಗಿದ್ದ ಸೊಹ್ರಾಬುದ್ದೀನ್‌ ನಕಲಿ ಎನ್‌ಕೌಂಟರ್‌ ಪ್ರಕರಣ ಸಂಬಂಧ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಸಿಬಿಐ  ವಿಶೇಷ ನ್ಯಾಯಾಧೀಶ ನ್ಯಾ. ಲೋಯಾ ಅವರ ಪ್ರಕರಣ ಸಂಬಂಧ ಎರಡು ಅರ್ಜಿಗಳನ್ನು ಬಾಂಬೆ ಹೈಕೋರ್ಟ್‌ನಿಂದ ತನಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.

ಲೋಯಾ ಅವರ ಸಾವಿನ ಪ್ರಕರಣವನ್ನು ಮರು ಪರಿಶೀಲಿಸುವಂತೆ ಬಾಂಬೆ ವಕೀಲರ ಸಂಘ ಅರ್ಜಿ ಸಲ್ಲಿಸಿತ್ತು. ಈ ಕುರಿತ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ಜೊತೆಗೆ ಮುಂದಿನ ವಿಚಾರಣೆಯನ್ನು ಫೆಬ್ರವರಿ 2ಕ್ಕೆ ನಿಗದಿಪಡಿಸಿದ್ದು, ಈ ಪ್ರಕರಣ ಸಂಬಂಧ ಯಾವುದೇ ಪಿಐಎಲ್‌ಗಳನ್ನು ಸ್ವೀಕರಿಸದಂತೆ ಇತರೆ ಕೋರ್ಟ್‌ಗಳಿಗೆ ಆದೇಶಿಸಿದೆ.

ಅಮಿತ್‌ ಶಾ ಭಾಗಿಯಾಗಿದ್ದಾರೆನ್ನಲಾದ ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದ ಲೋಯಾ, ತೀರ್ಪಿಗೆ ಕೆಲ ದಿನಗಳಿರುವಾಗಲೇ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಈ ಪ್ರಕರಣ ಸಾಕಷ್ಟು ಅನುಮಾನಗಳನ್ನು ಹುಟ್ಟಿಹಾಕಿದ್ದು, ಲೋಯಾ ಅವರ ಸಾವಿನ ತನಿಖೆಯನ್ನು ನಡೆಸುವಂತೆ ವಕೀಲರು ಮನವಿ ಮಾಡಿದ್ದು, ಪ್ರಕರಣ ಮತ್ತೆ ಜೀವ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Reply

Your email address will not be published.